ರಾಜ್ಯ

ಬೆಂಗಳೂರು: ''ರೈಡ್ ವಿಥ್ ಸೋಲ್ಡರ್ಸ್'' ಹುತಾತ್ಮ ವೀರ ಯೋಧರ ಗೌರವಾರ್ಥ ಬೃಹತ್ ಬೈಕ್ ಜಾಥಾ!

ಕಾರ್ಗಿಲ್ ವಿಜಯ್‌ ದಿನದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ಕಾರ್ಗಿಲ್‌ ವೀರ ಯೋಧರು, ಸಂಚಾರಿ ಪೊಲೀಸರ ತಂಡ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ “ರೈಡ್‌ ವಿಥ್‌ ಸೋಲ್ಡರ್ಸ್” ಬೈಕ್‌ ಜಾಥಾ ಆಯೋಜಿಸಲಾಗಿತ್ತು.

ಬೆಂಗಳೂರು: ''ರೈಡ್ ವಿಥ್ ಸೋಲ್ಡರ್ಸ್'' ಹುತಾತ್ಮ ವೀರ ಯೋಧರ ಗೌರವಾರ್ಥ ಬೃಹತ್ ಬೈಕ್ ಜಾಥಾ!
ಬೈಕ್ ಜಾಥಾ ಚಾಲನೆ ಸಮಾರಂಭದ ಚಿತ್ರ
Published On :

ಬೆಂಗಳೂರು: ಕಾರ್ಗಿಲ್ ವಿಜಯ್‌ ದಿನದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ಕಾರ್ಗಿಲ್‌ ವೀರ ಯೋಧರು, ಸಂಚಾರಿ ಪೊಲೀಸರ ತಂಡ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ  “ರೈಡ್‌ ವಿಥ್‌ ಸೋಲ್ಡರ್ಸ್” ಬೈಕ್‌ ಜಾಥಾ ಆಯೋಜಿಸಲಾಗಿತ್ತು.

ಎಂ.ಜಿ. ರಸ್ತೆಯ ಮಾಣಿಕ್‌ ಶಾ ಪರೇಡ್‌ ಮೈದಾನದಿಂದ ವಿಜಯನಗರದ ಬಿಜಿಎಸ್‌ ಕ್ರೀಡಾಂಗಣದವರೆಗೆ ಸುಮಾರು 12 ಕಿಲೋಮೀಟರ್‌  ದೂರ ಒಂದು ಸಾವಿರ ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜದೊಂದಿಗೆ ಜಾಥಾ ಸಾಗಿತು. ಶಾಸಕ ಸಿ ಕೆ . ರಾಮಮೂರ್ತಿ, ಮಾಜಿ ಯೋಧರ ಸಂಘದ ಅಧ್ಯಕ್ಷ ಶಿವಣ್ಣ,  ಮತ್ತಿತರ ಗಣ್ಯರು ಭಾಗವಹಿಸಿದ್ದರು. ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿ ಬಾಂಬ್‌ ದಾಳಿಯಿಂದ ಬದುಕುಳಿದು ಬಂದ ಕಾರ್ಗಿಲ್ ಯೋಧ ನವೀನ್‌ ನಾಗಪ್ಪ ಪಾಲ್ಗೊಂಡು ದೇಶಾಭಿಮಾನ ಉಕ್ಕಿಸಿದರು.

Story image

ಕಾರ್ಗಿಲ್‌ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ವೀರ ಯೋಧರನ್ನು ಸ್ಮರಿಸಿ, ಹುತಾತ್ಮರಾದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಜಾಥಾ ಆಯೋಜಿಸಲಾಗಿತ್ತು. ಮಹಿಳಾ ಬೈಕರ್ಸ್‌ ಗಳು, ಸಂಚಾರಿ ಪೊಲೀಸರು, ಬಿ.ಎಸ್.ಎಫ್‌ ಯೋಧರು, 300 ಮಂದಿ ಮಾಜಿ ಯೋಧರು, ನೂರಾರು ವೀರ ನಾರಿಯರು ಬೈಕ್‌ ಗಳ ಮೂಲಕ ಸೇನಾ ಪಡೆಗೆ ಗೌರವ ಸಲ್ಲಿಸಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.