ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ: ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್, ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಸಂಭವಿಸಿದ್ದು, ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಶುಕ್ರವಾರ ರಾತ್ರಿ ನೆಲಕ್ಕುರುಳಿ ಬಿದ್ದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಸಂಭವಿಸಿದ್ದು, ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಶುಕ್ರವಾರ ರಾತ್ರಿ ನೆಲಕ್ಕುರುಳಿ ಬಿದ್ದಿದೆ.
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮೆಟ್ರೋ (metro) ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ನೆಲಕ್ಕುರುಳಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲ್ಕ್ ಬೋರ್ಡ್‌ನಿಂದ ಮಡಿವಾಳಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಮ್ಮ ಮೆಟ್ರೋ ಕಾಮಗಾರಿ ಸಂದರ್ಭ ಪಿಲ್ಲರ್ಗೆ ಹಾಕುವ ತಂತಿ ಮೇಲೆತ್ತುತ್ತಿರುವಾಗ ಏಕಾಏಕಿ ಕ್ರೇನ್ನ ಹೈಡ್ರಾಲಿಕ್ನಲ್ಲಿ ಸಮಸ್ಯೆ ಉಂಟಾಗಿ ಕ್ರೇನ್ ಹಠಾತ್ ಕುಸಿದಿದೆ. ಆಗ ಕಂಬಿಗಳೆಲ್ಲ ವಾಲಿ ಬಿದ್ದಿವೆ. ಅದೃಷ್ಟವಶಾತ್ ಆ ಸಮಯದಲ್ಲಿ ಕಾರ್ಮಿಕರು ಕಡಿಮೆ ಇದ್ದಿದ್ದರಿಂದ ಸಂಭಾವ್ಯ ಭಾರಿ ಅನಾಹುತ ತಪ್ಪಿದೆ. ಈ ಪ್ರಕರಣದಿಂದಾಗಿ ಕೆಲ ಹೊತ್ತು ಮಡಿವಾಳ ಜಂಕ್ಷನ್ ಬಳಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಜಾರಿ ಬಿಳ್ಳಲು ಕಾರಣ ಏನು ಎಂಬುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ತಾತ್ಕಾಲಿಕ ಮಾರ್ಗ ಬದಲಾವಣೆ
ಮಡಿವಾಳ ಕಡೆಗೆ ಬರುವವರು ಬಿಟಿಎಂ ಲೇಔಟ್ ಮೂಲಕ ಸಂಚರಿಸಬೇಕು. ಅದೇ ರೀತಿಯಾಗಿ ಬಿಟಿಎಂ ಲೇಔಟ್ನಿಂದ ಮಡಿವಾಳಕ್ಕೆ ಹೋಗುವವರು ಎಚ್ಎಸ್ಆರ್ 14ನೇ ಮುಖ್ಯ ರಸ್ತೆ ಮೂಲಕ ಸಾಗಬೇಕಿದೆ.
ಇತ್ತೀಚೆಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು, ಮಹಿಳೆ ಮತ್ತು ಎರಡು ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ನಗರದ ನಾಗವಾರದಲ್ಲಿ ನಡೆದಿತ್ತು. ಕಲ್ಯಾಣ್ ನಗರದಿಂದ ಹೆಚ್ಆರ್ಬಿಆರ್ ಲೇಔಟ್ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್ನ ರಾಡ್ಗಳು ರಸ್ತೆ ಮೇಲೆ ಕುಸಿದು ಬಿದ್ದ ಪರಿಣಾಮ ಅವಘಡ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ನಮ್ಮ ಮೆಟ್ರೊ ಕಾಮಗಾರಿ ವೇಳೆ ಮತ್ತೊಂದು ಅವಘಡ ಉಂಟಾಗಿರುವುದು ಸಾರ್ವಜನಿಕರಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


