ಕಳಪೆ ಸ್ಥಿತಿಯಲ್ಲಿರುವ 340 ಆ್ಯಂಬುಲೆನ್ಸ್ ವಾಹನಗಳ ಸೇವೆ ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದು!
ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ '108' ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ,

ಬೆಂಗಳೂರು: ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ '108' ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ,
ನಿಯಮಿತ ಕಾರ್ಯವಿಧಾನದಂತೆ ಆಂಬ್ಯುಲೆನ್ಸ್‌ಗಳನ್ನು ಬದಲಾಯಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
4 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸುವ ಎಲ್ಲಾ ಆಂಬ್ಯುಲೆನ್ಸ್‌ಗಳನ್ನು ನಾಲ್ಕು ವರ್ಷಗಳಲ್ಲಿ ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪನಿರ್ದೇಶಕ (ಇಎಂಆರ್ಐ-108) ಡಾ ಆರ್ ನಾರಾಯಣ್ ಅವರು ಮಾತನಾಡಿ, 2015-16ರಲ್ಲಿ ಕಳಪೆ ಸ್ಥಿತಿಗೆ ತಲುಪಿದ್ದ ಆ್ಯಂಬುಲೆನ್ಸ್ ಗಳನ್ನು ಬದಲಾಯಿಸಲಾಗಿತ್ತು. ಪ್ರಸ್ತುತ ಬದಲಿಸಲು ಮುಂದಾಗಿರುವ 340 ಆ್ಯಂಬುಲೆನ್ಸ್ ಗಳು ಸುಮಾರಿ 7 ವರ್ಷಗಳಷ್ಟು ಹಳೆಯದ್ದಾಗಿವೆ. ಹೀಗಾಗಿ ಅವುಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಆ್ಯಂಬುಲೆನ್ಸ್ ಗಳ ಬದಲಾವಣೆ ಮಾಡುವ ಸಮಯದಲ್ಲಿ ಸೇವೆಗಳಲ್ಲಿ ಯಾವುದೇ ವ್ಯತ್ಯಯಗಳು ಕಂಡು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಜಿವಿಕೆ-ಇಎಂಆರ್'ಐ ಕಳೆದ 14 ವರ್ಷಗಳಿಂದ ರಾಜ್ಯದಲ್ಲಿ '108' ಆಂಬ್ಯುಲೆನ್ಸ್ ಸೇವೆಯನ್ನು ಸೇವೆಯನ್ನು ಒದಗಿಸುತ್ತಿದೆ. ಹೊಸ ಆಂಬುಲೆನ್ಸ್ ಖರೀದಿ ಕುರಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 3-4 ತಿಂಗಳುಗಳಲ್ಲಿ ಹೊಸ ಆ್ಯಂಬುಲೆನ್ಸ್ ಗಳು ರಸ್ತೆಗಿಳಿಯಲಿವೆ ಎಂದು ಹೇಳಿದ್ದಾರೆ.
ಈ ಹಿಂದೆ, ಆಂಬ್ಯುಲೆನ್ಸ್‌ಗಳ ನಿಯಮಗಳು ಮತ್ತು ಗುಣಮಟ್ಟ ಪರಿಶೀಲನೆಗಳು ಹೆಚ್ಚು ಕಟ್ಟುನಿಟ್ಟಾಗಿರಲಿಲ್ಲ. ಇದೀಗ, ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಕಂಪನಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಹೊಸ ಸೇವಾ ಪೂರೈಕೆದಾರರೊಂದಿಗೆ ರಾಜ್ಯಕ್ಕೆ ಉತ್ತಮ ಗುಣಮಟ್ಟದ ಆಂಬ್ಯುಲೆನ್ಸ್‌ಗಳನ್ನು ಒದಗಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


