ambulances

ಜೀವ ಉಳಿಸುವ ಆ್ಯಂಬುಲೆನ್ಸ್ ಪ್ರಯಾಣಿಕ ವಾಹನವಾಗಿ ಬಳಕೆ: GIMS ವಿರುದ್ಧ ಗಂಭೀರ ಆರೋಪ; Video ವೈರಲ್
ಜಿಲ್ಲೆಯ ಕೆಎಚ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕೆಎಚ್‌ಪಿಐಎಂಎಸ್) ಆಸ್ಪತ್ರೆ ಬಳಿ ಪ್ರಯಾಣಿಕರನ್ನು ಸಾಗಿಸಲು ಆ್ಯಂಬುಲೆನ್ಸ್ ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹದಗೆಟ್ಟ ರಸ್ತೆಗೆ ಕೊಪ್ಪಳ ಸಾಕ್ಷಿ: ಒಂದು ವಾರದೊಳಗೆ ಆ್ಯಂಬುಲೆನ್ಸ್ ನಲ್ಲಿ ನಾಲ್ಕು ಹೆರಿಗೆ!
ಕೊಪ್ಪಳ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಆ್ಯಂಬುಲೆನ್ಸ್ ನಲ್ಲಿ ನಾಲ್ಕು ಗರ್ಭಿಣಿಯರಿಗೆ ಹೆರಿಗೆ ಆಗಿರುವ ಘಟನೆಗಳು ವರದಿಯಾಗಿವೆ, ಆರೋಗ್ಯ ಇಲಾಖೆಗೆ ಇದು ಸಾಮಾನ್ಯ ಎನಿಸಿದರೂ, ಹದಗೆಟ್ಟ ರಸ್ತೆಗಳೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿ ಎಫೆಕ್ಟ್: ಔಷಧ, ಆ್ಯಂಬುಲೆನ್ಸ್'ಗಳ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ!
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಇದರಿಂದಾಗಿ ವಾರ್ಷಿಕ ಔಷಧ ಖರೀದಿ, ಡಯಾಲಿಸಿಸ್ ಮತ್ತು 108 ಆ್ಯಂಬುಲೆನ್ಸ್‌ಗಳ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆ್ಯಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡಲು ಬಂತು 'ಬೈಕ್ ಎಸ್ಕಾರ್ಟ್': ಜನರ ಜೀವ ಉಳಿಸಲು ಹೊಸ ಸೇವೆ ಆರಂಭಿಸಿದ ಯುವಕ!
ನಮ್ಮ ಬೆಂಗಳೂರು ದಿನದಿಂದ ದಿನಕ್ಕೆ ಅಗಾಧವಾಗಿ ಬೆಳೆಯ ತೊಡಗಿದ್ದು, ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದರಲ್ಲಿ ಪ್ರಮುಖ ಸಮಸ್ಯೆ ಸಂಚಾರ ದಟ್ಟಣೆ. ಈ ಸಂಚಾರ ದಟ್ಟಣೆಯಿಂದಾಗಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಅಗಾಗ್ಗೆ ಸಾವುನೋವು ಸಂಭವಿಸುವುದನ್ನು ನಾವು ನೋಡುತ್ತಿರುತ್ತೇವೆ.

ಕಳಪೆ ಸ್ಥಿತಿಯಲ್ಲಿರುವ 340 ಆ್ಯಂಬುಲೆನ್ಸ್ ವಾಹನಗಳ ಸೇವೆ ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದು!
ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ '108' ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ,

ಅನಾರೋಗ್ಯಕ್ಕೀಡಾದ ಮನುಷ್ಯರ ಸಾಗಿಸಲು ಜಾನುವಾರುಗಳ ಆ್ಯಂಬುಲೆನ್ಸ್ ಬಳಕೆ?: ಟೆಂಡರ್ ಪ್ರಕ್ರಿಯೆಯಲ್ಲಿ ದೋಷ ಎಂದ ಜಿವಿಕೆ-ಇಎಂಆರ್‌ಐ ಸಂಸ್ಥೆ
ಕರ್ನಾಟಕದಲ್ಲಿ 14 ವರ್ಷಗಳಿಂದ 108 ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಜಾನುವಾರುಗಳ ಆ್ಯಂಬುಲೆನ್ಸ್ ಸೇವೆಗಳನ್ನು ಒದಗಿಸುವ ಕಂಪನಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ದೋಷಗಳಿವೆ ಎಂದು ಆರೋಪಿಸಿದೆ.

ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದೆ: ಹೈಕೋರ್ಟ್'ಗೆ ಸರ್ಕಾರ ಮಾಹಿತಿ
ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ವಾಹನ ಸಾಫ್ಟ್ ವೇರ್ ಆ್ಯಂಬುಲೆನ್ಸ್ ಜಿಪಿಎಸ್ ದತ್ತಾಂಶ ಕುರಿತು ನಿರ್ವಹಣೆ ಮಾಡಲಾಗುತ್ತದೆ. ಇನ್ನೂ 108 ಸೇವಾದಾರರನ್ನು ಆಯ್ಕೆ ಮಾಡಲು 21 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್'ಗೆ ಬುಧವಾರ ಮಾಹಿತಿ ನೀಡಿದೆ.

ಆ್ಯಂಬುಲೆನ್ಸ್'ಗಳ ಮೇಲೆ ಹದಗೆಟ್ಟ ರಸ್ತೆಗಳ ಗಂಭೀರ ಪರಿಣಾಮ: ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಸಂಕಷ್ಟದಲ್ಲಿ ರೋಗಿಗಳು!
ನಗರದಲ್ಲಿನ ಕಳಪೆ ರಸ್ತೆ ಮೂಲಸೌಕರ್ಯ, ನಿರಂತರ ಮಳೆ ಮತ್ತು ರಸ್ತೆ ಗುಂಡಿಗಳು ಆಂಬ್ಯುಲೆನ್ಸ್ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ಪರಿಣಾಮ ನಿರ್ಣಾಯಕ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲಾಗದೆ ರೋಗಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಬಿಪಿನ್ ರಾವತ್, ಇತರ ಯೋಧರ ಮೃತದೇಹ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತ, ಪೊಲೀಸರಿಗೆ ಗಾಯ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಇತರ 11 ಸೇನಾ ಅಧಿಕಾರಿಗಳ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ಎರಡು...

