ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ: ಸಿಎಂ ಬೊಮ್ಮಾಯಿ
ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.ಮಹಾದೇವಪುರದಲ್ಲಿನ ಐಟಿ , ಬಿಟಿ ಕಂಪನಿಗಳನ್ನು ನೋಡುತ್ತಿದ್ದರೆ ಗರುಡಾಚಾರ್ ಪಾಳ್ಯ ದೇಶದಲ್ಲಿ ಸಿಲಿಕಾನ್ ವ್ಯಾಲಿ ಅನ್ನಿಸುತ್ತದೆ ಎಂದು ಅವರು ತಿಳಿಸಿದರು.

ಬೆಂಗಳೂರು: ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಹಾದೇವಪುರ ಪ್ರದೇಶದ ಗರುಡಾಚಾರ್ ಪಾಳ್ಯದಲ್ಲಿನ ಐಟಿ ಉದ್ಯಮ ಅಭಿವೃದ್ಧಿ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಮಹಾದೇವಪುರದಲ್ಲಿನ ಐಟಿ , ಬಿಟಿ ಕಂಪನಿಗಳನ್ನು ನೋಡುತ್ತಿದ್ದರೆ ಗರುಡಾಚಾರ್ ಪಾಳ್ಯ ದೇಶದಲ್ಲಿ ಸಿಲಿಕಾನ್ ವ್ಯಾಲಿ ಅನ್ನಿಸುತ್ತದೆ ಎಂದು ಅವರು ಹೇಳಿದರು.
ಮಹಾದೇವಪುರ ನಗರ ಮತ್ತು 110 ಹಳ್ಳಿಗಳನ್ನೊಳಗೊಂಡ ಗ್ರಾಮಾಂತರ ಪ್ರದೇಶದಿಂದ ಕೂಡಿರುವ ಪ್ರದೇಶವಾಗಿದೆ. ಸಹಜವಾಗಿ ದೇವಾಲಯಗಳು ಮತ್ತು ಸಮುದಾಯ ಹಾಲ್ ಗಳ ನಿರ್ಮಾಣಕ್ಕೆ ಬೇಡಿಕೆಯಿದೆ. ಈ ಹಿಂದೆ ಇದು ಹಳ್ಳಿಯಾಗಿತ್ತು. ಇದೀಗ ನಗರದ ಕೇಂದ್ರ ಪ್ರದೇಶವಾಗಿದೆ. ಇದು ಗ್ರಾಮೀಣ ಪರಿಸರ ಮತ್ತು ಆಧುನಿಕತೆ ಎರಡನ್ನು ಒಳಗೊಂಡಿದೆ ಎಂದರು.
ಮನುಷ್ಯ ದೇವರಲ್ಲಿ ನಂಬಿಕೆ ಹೊಂದಬೇಕು. ಪ್ರತಿಯೊಂದು ಅಭಿವೃದ್ಧಿಗೂ ದೇವರ ಆಶೀರ್ವಾದ ಇರಬೇಕು. ಭಕ್ತಿಯಿಂದ ದೈವಬಲವನ್ನು ಪಡೆಯಲು ಸಾಧ್ಯ. ದೇವರ ದರ್ಶನ ಮತ್ತು ಆಶೀರ್ವಾದ ಪಡೆಯಲು ನಮ್ಮ ಪೂರ್ವಿಕರು ದೇವಾಲಯಗಳನ್ನು ಕಟ್ಟಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


