ರಾಜ್ಯದಲ್ಲಿ ರೂ. 3. 455 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಜನೆಗೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳಹೂಡಿಕೆಗೆ ಅನುಮೋದನೆ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಜನೆಗೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳಹೂಡಿಕೆಗೆ ಅನುಮೋದನೆ ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ತಿಳಿಸಿದ್ದಾರೆ.
ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.
15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ.
ಅನುಮೋದನೆ ನೀಡಿರುವ ಯೋಜನೆಗಳ ವಿವರ:
* ಮೈಸೂರು ಸ್ಟೀಲ್ಸ್ ಲಿಮಿಟೆಡ್ ನಿಂದ ಮೇಟಗಾನಹಳ್ಳಿಯಲ್ಲಿ ರೂ. 405.43 ಕೋಟಿ ರೂ, ಹೂಡಿಕೆ (200 ಉದ್ಯೋಗ) ಎನ್ ಐಡಿಸಿ ಇಂಡಸ್ಟ್ರಿಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್ ನಿಂದ ಬೇಲೂರು ಕೈಗಾರಿಕಾ ಪ್ರದೇಶದ ಕೋಟೂರ್ ನಲ್ಲಿ ರೂ.350 ಕೋಟಿ ಹೂಡಿಕೆ( 730 ಉದ್ಯೋಗ ಸೃಷ್ಟಿ) ಧಾರವಾಡದ ಎಫ್ ಎಂಸಿಜಿ ಕ್ಲಸ್ಟರ್ ನಲ್ಲಿ ಸಿಲಾನ್ ಬೆವರೇಜಸ್ ನಿಂದ ರೂ. 256.3 ಕೋಟಿ ಹೂಡಿಕೆ( 200 ಉದ್ಯೋಗ ಸೃಷ್ಟಿ). ಬೆಳಗಾವಿ ಜಿಲ್ಲೆ ಕಣಗಲ್ ಕೈಗಾರಿಕಾ ಪ್ರದೇಶದಲ್ಲಿ ಬಾಲಾಜಿ ವೇರ್ ಹೌಸ್ ಪ್ರೈವೇಟ್ ಲಿಮಿಟೆಡ್ ನಿಂದ ರೂ. 252. 25 ಕೋಟಿ ಹೂಡಿಕೆ( 500 ಉದ್ಯೋಗ) ಚಾಮರಾಜನಗರ ಬಡಗುಪ್ಪೆ, ಕೆಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್ ನಿಂದ ರೂ. 253 ಕೋಟಿ ಹೂಡಿಕೆ (500 ಉದ್ಯೋಗ) ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕ್ಸಿಸೋಡಾ ಇಂಡಿಯಾ ಪ್ರವೈಟ್ ಲಿಮಿಟೆಡ್ ನಿಂದ ರೂ. 138 ಕೋಟಿ ಹೂಡಿಕೆ (160 ಉದ್ಯೋಗ ) ಸೇರಿದಂತೆ ಮತ್ತಿತರ ಕಂಪನಿಗಳಿಂದ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


