ಕರ್ನಾಟಕದಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆಗೆ ನೀತಿ ಆಯೋಗ ನಕಾರ
ಫಾರ್ಮಸಿಟಿಕಲ್ ಪಾರ್ಕ್ ನ್ನು ಸ್ಥಾಪಿಸುವ ವಿಚಾರದಲ್ಲಿ ನೀತಿ ಆಯೋಗದ ಪರೀಕ್ಷೆಯಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೆಚೂರು ವಿಫಲವಾಗಿದ್ದು ಆಂಧ್ರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶಗಳು ಮುಂಚೂಣಿಯಲ್ಲಿವೆ.

ಹುಬ್ಬಳ್ಳಿ: ಫಾರ್ಮಸಿಟಿಕಲ್ ಪಾರ್ಕ್ ಸ್ಥಾಪಿಸುವ ವಿಚಾರದಲ್ಲಿ ನೀತಿ ಆಯೋಗದ ಪರೀಕ್ಷೆಯಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೆಚೂರು ವಿಫಲವಾಗಿದ್ದು ಆಂಧ್ರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶಗಳು ಮುಂಚೂಣಿಯಲ್ಲಿವೆ.
ನೀತಿ ಆಯೋಗ ಕರ್ನಾಟಕವನ್ನು ಪರಿಗಣಿಸಿಲ್ಲವಾದ ಕಾರಣ ಈಗ ಫಾರ್ಮ ಪಾರ್ಕ್ ಸ್ಥಾಪಿಸುವುದು ಕರ್ನಾಟಕ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ.
ರಾಸಾಯನಿಕ ಹಾಗೂ ಗೊಬ್ಬರ ರಾಜ್ಯ ಖಾತೆಯ ಕೇಂದ್ರ ಸಚಿವ ಭಗವಂತ್ ಖೂಬಾ, ಕರ್ನಾಟಕ ಸೇರಿದಂತೆ ಸರ್ಕಾರಗಳು ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ನೀತಿ ಆಯೋಗ ಒದಗಿಸಿದ ವಿವಿಧ ನಿಯತಾಂಕಗಳು ಮತ್ತು ಸೌಲಭ್ಯಗಳ ಆಧಾರದ ಮೇಲೆ ಮೂರು ರಾಜ್ಯಗಳನ್ನು ಪಟ್ಟಿ ಮಾಡಿದ್ದು ವ್ಯಾಪಾರ ನಡೆಸಲು ಸ್ಥಳ ಪ್ರಯೋಜನಗಳನ್ನೂ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಫಾರ್ಮಾ ಪಾರ್ಕ್ ಯೋಜನೆ ಲಭಿಸಲಿದೆ ಎಂಬ ವಿಶ್ವಾಸವಿತ್ತು ಆದರೆ ರಾಜ್ಯ ನೀತಿ ಆಯೋಗದ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಆದರೆ ಕಲ್ಯಾಣ ಕರ್ನಾಟಕ ಹಿಂದುಳಿದಿರುವ ಮಾನದಂಡವನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಇನ್ವೆಸ್ಟ್ ಕರ್ನಾಟಕದಲ್ಲಿ ರಾಜ್ಯ ಸರ್ಕಾರ 2 ಲಕ್ಷ ಕೋಟಿ ಮೌಲ್ಯದ ಎಂಒಯು ಗಳಿಗೆ ಸಹಿ ಹಾಕಿದ್ದು ಫಾರ್ಮಾ ಸಂಸ್ಥೆಗಳನ್ನು ಕಡೆಚೂರ್ ನಲ್ಲಿ ಘಟಕಗಳನ್ನು ತೆರೆಯುವುದಕ್ಕೆ ಉತ್ತೇಜಿಸುತ್ತಿದೆ ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಗೊಬ್ಬರ ಸಂಸ್ಥೆಗಳನ್ನು ಸ್ಥಾಪಿಸುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಹೊಸ ಕಂಪನಿಗಳನ್ನು ಪ್ರಾರಂಭಿಸುವುದರ ಬದಲಿಗೆ ಈಗಾಗಲೇ ಮುಚ್ಚಿ ಹೋಗಿರುವ ಸಂಸ್ಥೆಗಳನ್ನು ಪುನಾರಂಭಗೊಳಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದು ಇಂತಹ 5 ಯುನಿಟ್ ಗಳನ್ನು ಈಗಾಗಲೇ ಪುನಾರಂಭಗೊಳಿಸಲಾಗಿದೆ ದೇಶದಲ್ಲಿ ಗೊಬ್ಬರಗಳಿಗೆ ಒಟ್ಟು 3.4 ಲಕ್ಷ ಮೆಟ್ರಿಕ್ ಟನ್ ನಷ್ಟು ಬೇಡಿಕೆ ಇದೆ. ಈ ಬೇಡಿಕೆಯನ್ನು ಈಗಿರುವ ಕಂಪನಿಗಳೇ ಪೂರೈಸುತ್ತಿವೆ ಆದ್ದರಿಂದ ಹೊಸ ಗೊಬ್ಬರ ಸಂಸ್ಥೆಗಳ ಪ್ರಾರಂಭವಕ್ಕೆ ಚಿಂತನೆ ನಡೆದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


