ದ್ವೇಷ, ಪಕ್ಷಪಾತ ಹತ್ತಿಕ್ಕಲು ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಅಭಿಯಾನ ಆರಂಭ
77 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಅಡೆತಡೆಗಳನ್ನು ದೂರಾಗಿಸುವ ಸಲುವಾಗಿ ನೂರಾರು ಜಾತ್ಯತೀತ ಸಂಘಟನೆಗಳು ಸೋಮವಾರ ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಪ್ರಾರಂಭಿಸಿವೆ.

ಬೆಂಗಳೂರು: 77 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಅಡೆತಡೆಗಳನ್ನು ದೂರಾಗಿಸುವ ಸಲುವಾಗಿ ನೂರಾರು ಜಾತ್ಯತೀತ ಸಂಘಟನೆಗಳು ಸೋಮವಾರ ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಪ್ರಾರಂಭಿಸಿವೆ.
ರಾಜ್ಯದಲ್ಲಿ ಆರಂಭವಾಗಿರುವ ಅಭಿಯಾನವು ಕನ್ನಡ ಕವಿ ಕುವೆಂಪು ಅವರ 'ತೆರೆದಿದೆ ಮನೆ ಓ ಬಾ ಅತಿಥಿ' ಎಂಬ ಹಾಡಿನಿಂದ ಪ್ರೇರಿತವಾಗಿದೆ.
ಇತರರೊಂದಿಗೆ ಕರ್ನಾಟಕದಲ್ಲಿ ಅಭಿಯಾನವನ್ನು ಮುನ್ನಡೆಸುತ್ತಿರುವ ಅನಿತಾ ಚೆರಿಯಾ ಅವರು ಮಾತನಾಡಿ, “ಭಾರತದಲ್ಲಿ ಸಮುದಾಯಗಳ ವ್ಯವಸ್ಥಿತ ಪ್ರತ್ಯೇಕತೆಯು ಅಪನಂಬಿಕೆ, ದ್ವೇಷ ಮತ್ತು ಭಯದಲ್ಲಿ ಊಹೆಗೂ ನಿಲುಕದಷ್ಟು ಆಳಕ್ಕೆ ತಲುಪಿದೆ. ದ್ವೇಷ, ಧ್ರುವೀಕರಣ ಮತ್ತು ಹಿಂಸಾಚಾರವನ್ನು ಬೋಧಿಸುವ ಕೋಮುವಾದಿ ಮತ್ತು ಸಮಾಜ ವಿಭಜಕ ಶಕ್ತಿಗಳು ಈ ಅವನತಿಯು ಮತ್ತಷ್ಟು ಆಳಕ್ಕೆ ಸಾಗಲು ಸಹಾಯ ಮಾಡುತ್ತಿದೆ. ಈ ಬೆಳವಣಿಗೆ ನಮ್ಮ ಇತಿಹಾಸ ಮತ್ತು ಸ್ಮರಣೆ ಮಾತ್ರವಲ್ಲದೆ ನಮ್ಮ ಸಂವಿಧಾನದ ಹೃದಯವಾಗಿರುವ ಬಹುತ್ವ ಮತ್ತು ವೈವಿಧ್ಯತೆಗೆ ಬೆದರಿಕೆಯನ್ನೊಡ್ಡುತ್ತಿವೆ ಎಂದು ಹೇಳಿದ್ದಾರೆ.
ಜಾತಿ, ವರ್ಗ, ಧರ್ಮ, ಲೈಂಗಿಕ ದೃಷ್ಟಿಕೋನ, ಭಾಷೆ, ಜನಾಂಗೀಯತೆ, ಪ್ರದೇಶ ಮತ್ತು ಅಂಗವೈಕಲ್ಯದ ಕುರಿತು ಪಕ್ಷಪಾತಗಳ ಮಾಡುವವವರ ವಿರುದ್ಧ ಹೋರಾಡಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಅಭಿಯಾನದ ಅಡಿಯಲ್ಲಿ, ಜನರು ಮತ್ತೊಂದು 'ಸಮುದಾಯ'ದವರ ಮನೆಗೆ ಭೇಟಿ ನೀಡುತ್ತಾರೆ, ಕೆಲವು ಗಂಟೆಗಳ ಕಾಲ ಅವರೊಂದಿಗೆ ಕಳೆಯುತ್ತಾರೆ ಮತ್ತು ಒಂದು ಕಪ್ ನೀರು, ಚಹಾ ಅಥವಾ ಊಟವನ್ನು ಸೇವನೆ ಮಾಡುತ್ತಾರೆ. ಮಾತು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಅಭಿಯಾನವನ್ನು ಪ್ರಚಾರ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಹರ್ ಘರ್ ತಿರಂಗಾ' ಅಭಿಯಾನ: ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕಿ; ಜನತೆಗೆ ಪ್ರಧಾನಿ ಮೋದಿ ಕರೆ
ಈ ಅಭಿಯಾನವು ಜನವರಿ 30, 2024 ರವರೆಗೆ ಮುಂದುವರಿಯಲಿದೆ. ಗೊರಗುಂಟೆಪಾಳ್ಯ ಮತ್ತು ಕೆಂಗೇರಿಯಲ್ಲಿ ಮುನ್ನಾಡೆ ಸಾಮಾಜಿಕ ಸಂಘಟನೆಯ ನೇತೃತ್ವದಲ್ಲಿ 50 ವಲಸೆ ಕಾರ್ಮಿಕರ ಕುಟುಂಬಗಳು ಮತ್ತು ಸ್ಥಳೀಯ ಕಾರ್ಮಿಕರ ನಡುವೆ ಸಭೆಗಳನ್ನು ನಡೆಸಲಾಗುತ್ತದೆ.
ಆನೇಕಲ್‌ನಲ್ಲಿ ಗಮನ ಮಹಿಳಾ ಸಮೂಹದ ಸದಸ್ಯರು ಬಂಡೇಪಾಳ್ಯ, ಬಿಳೇಕಳ್ಳಿಯಲ್ಲಿನ ಎಲ್ಲಾ ಸಮುದಾಯದ ಜನರು, ಕಾರ್ಮಿಕರೊಂದಿಗೆ ಒಗ್ಗೂಡಿಸುವ ಕೆಲಸ ಮಾಡುತ್ತಾರೆ. ಸ್ತ್ರೀ ಜಾಗೃತಿ ಡೊಮೆಸ್ಟಿಕ್ ವರ್ಕರ್ಸ್ ಯೂನಿಯನ್ ಸದಸ್ಯರು, ದೊಡ್ಡಬಳ್ಳಾಪುರದ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು, ದೊಡ್ಡಬಳ್ಳಾಪುರದಲ್ಲಿ ಐದು ರೈತರೊಂದಿಗೆ ಸಂವಾದಗಳನ್ನು ನಡೆಸುತ್ತಾರೆ. ಅವರಿಂದ ಬರುವ ಮನವಿಗಳನ್ನು ಸ್ವೀಕರಿಸಿ, ಒಗ್ಗಟ್ಟಿನಿಂದ ಇರಲು ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕಲ್ಪನೆಯು ಕರ್ನಾಟಕ ಮತ್ತು ಅದರಾಚೆಗೂ ಒಂದು ಟ್ರೆಂಡ್ ಆಗುವ ವಿಶ್ವಾಸವಿದೆ. ಇದು ಸಾಮಾಜಿಕವಾಗಿ ನಿರ್ಮಾಣಗೊಂಡಿರುವ ಅಡೆತಡೆಗಳನ್ನು ಮುರಿಯಲಿದೆ ಎಂಬ ನಂಬಿಕೆ ಇದೆ. ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸುವ ಮೂಲಕ ಪ್ರೀತಿ ಹಂಚುವುದು ಮತ್ತು ಈ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಪ್ರಯತ್ನವಾಗಿದೆ ಇದಾಗಿದೆ ಎಂದು ಹೇಳಿದ್ದಾರೆ.
ಈ ಅಭಿಯಾನವು ಗೌರಿ ಲಂಕೇಶ್, ದಾಭೋಲ್ಕರ್ ದಿನ, ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ, ಸಂವಿಧಾನ ದಿನ, ಗಾಂಧಿ ಜಯಂತಿ, ಇತರೆ ಹಬ್ಬಗಳು, ಸ್ಮರಣಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


