ಬೆಂಗಳೂರು: ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಜೋಡಿ ಬಂಧನ
ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಯುವಕ ಹಾಗೂ ಆತನ 18 ವರ್ಷದ ಪ್ರಿಯತಮೆಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಯುವಕ ಹಾಗೂ ಆತನ 18 ವರ್ಷದ ಪ್ರಿಯತಮೆಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಿಯಕರನ ಆಜ್ಞೆಯ ಮೇರೆಗೆ ಯುವತಿ ಮೊಪೆಡ್‌ಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಈ ಜೋಡಿ ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಎಂಡಿಎಂಎಯಂತಹ ಅತ್ಯಾಧುನಿಕ ಡ್ರಗ್ಸ್ ಗಳನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಮೊಪೆಡ್ ಅನ್ನು ಎತ್ತುವ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ. ಯುವತಿ ತನ್ನ ಗುರುತನ್ನು ಮರೆಮಾಚಲು, ಮೊಪೆಡ್‌ಗಳನ್ನು ಕದಿಯುವಾಗ ಬುರ್ಖಾ ಧರಿಸುತ್ತಿದ್ದಳು. ಕಳ್ಳತನ ಮಾಡುವಾಗ ಯುವತಿಯ ಗೆಳೆಯ ದೂರದಲ್ಲಿ ನಿಂತು ಸಲಹೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು: ಕಳ್ಳತನ ಆರೋಪದಡಿ 'ಮಿಸ್ಟರ್ ಆಂಧ್ರ' ಅರೆಸ್ಟ್; ಸರಣಿ ಸರಗಳ್ಳತನಕ್ಕಿಳಿದ 'ಬಾಡಿ ಬಿಲ್ಡರ್' ಕತೆ!
ಆರೋಪಿಯನ್ನು ಶ್ರೀರಾಂಪುರದ ಅಂಬೇಡ್ಕರ್‌ನಗರದ ವಿ ಮುರುಗನ್(25) ಎಂದು ಗುರುತಿಸಲಾಗಿದ್ದು, ಯುವತಿಯನ್ನು ಥಣಿಸಂದ್ರದ ಸಾರಾಯಿಪಾಳ್ಯದ ನಿವಾಸಿಯಾಗಿದ್ದಾರೆ. ಮತ್ತೋರ್ವ ಆರೋಪಿ ಯಶವಂತಪುರದ ಮತ್ತಿಕೆರೆ ನಿವಾಸಿ ಬಿ.ಮುರಳಿ(23)ಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆರೋಪಿ. ಮುರಳಿ ಈ ಜೋಡಿಗೆ ವಾಹನಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


