ಸೆಂಟ್ರಲ್ ಅನಿಮಲ್ ಫೆಸಿಲಿಟಿಯಲ್ಲಿ ಪ್ರಾಣಿ ಹಿಂಸೆ: ಐಐಎಸ್ ಸಿ ಮುಖ್ಯಸ್ಥರಿಗೆ ಮನೇಕಾ ಗಾಂಧಿ ಪತ್ರ
ಸೆಂಟ್ರಲ್ ಅನಿಮಲ್ ಫೆಸಿಲಿಟಿ(ಸಿಎಎಫ್) ನಲ್ಲಿ ನಡೆಯುತ್ತಿರುವ ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಸೆಂಟ್ರಲ್ ಅನಿಮಲ್ ಫೆಸಿಲಿಟಿ(ಸಿಎಎಫ್) ನಲ್ಲಿ ನಡೆಯುತ್ತಿರುವ ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಗೆ ಪತ್ರ ಬರೆದಿದ್ದಾರೆ.
ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಅವರಿಗೆ ಮನೇಕಾ ಗಾಂಧಿ ಗುರುವಾರ ಪತ್ರ ಬರೆದಿದ್ದು, ಅದರ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಸಿಎಎಫ್ ನಲ್ಲಿ ಪ್ರತಿದಿನ 300 ಪ್ರಯೋಗಾಲಯ ಪ್ರಾಣಿಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ 18 ತಿಂಗಳಿಂದ ಸಿಎಎಫ್‌ನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಮನೇಕಾ ಅವರು ಆರೋಪಿಸಿದ್ದಾರೆ ಮತ್ತು ಅಕ್ರಮಗಳು ಹಾಗೂ ಲೈಂಗಿಕ ಕಿರುಕುಳದ ಆರೋಪಕ್ಕೆ ಡಾ ಸತೀಸ್ ಸಿ ರಾಘವನ್ ಅವರನ್ನು ದೂರಿದ್ದಾರೆ.
ಪ್ರಾಣಿಗಳನ್ನು ಕಳಪೆ ಸ್ಥಿತಿಯಲ್ಲಿ ಇರಿಸಲಾಗುತ್ತದೆ, ನಿಯಮಿತವಾಗಿ ಆಹಾರವನ್ನು ನೀಡಲಾಗುವುದಿಲ್ಲ ಮತ್ತು ವಿರಳವಾಗಿ ತೊಳೆಯಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಪ್ರಾಣಿಗಳು ಅಪೌಷ್ಟಿಕತೆಯಿಂದ ಮತ್ತು ಚರ್ಮದ ಕಾಯಿಲೆಗಳಿಂದ ಬಳಲುತ್ತಿವೆ. ಈ ಕಾರಣದಿಂದಾಗಿ ಐಐಎಸ್ ಸಿಯ ಸೆಂಟರ್ ಫಾರ್ ನ್ಯೂರೋ ಸೈನ್ಸ್ ವಿಭಾಗ ಸಿಎಎಫ್ ನಿಂದ ಸಂಶೋಧನೆಗಾಗಿ ಪ್ರಾಣಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


