ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ: ಬೆಂಗಳೂರು ಬಹುತೇಕ ಸ್ತಬ್ಧ
ದೀಪಾವಳಿ ಅಮಾವಾಸ್ಯೆ ದಿನ (ಅ.25) ರಂದು ಸೂರ್ಯ ಗ್ರಹಣ ಸಂಭವಿಸಿದ್ದು, ರಾಜ್ಯದ ಹಲವು ನಗರಗಳಲ್ಲಿ ಭಾಗಶಃ ಗ್ರಹಣ ಗೋಚರವಾಗಿದೆ.

ಬೆಂಗಳೂರು: ದೀಪಾವಳಿ ಅಮಾವಾಸ್ಯೆ ದಿನ (ಅ.25) ರಂದು ಸೂರ್ಯ ಗ್ರಹಣ ಸಂಭವಿಸಿದ್ದು, ರಾಜ್ಯದ ಹಲವು ನಗರಗಳಲ್ಲಿ ಭಾಗಶಃ ಗ್ರಹಣ ಗೋಚರವಾಗಿದೆ.
ಸಂಜೆ 5:12 ರ ವೇಳೆಯಲ್ಲಿ ಗೋಚರಿಸಿದ ಗ್ರಹಣಕ್ಕೆ ಸಂಜೆ 6 ಗಂಟೆ ವೇಳೆಗೆ ಸೂರ್ಯಾಸ್ತದೊಂದಿಗೆ ಮುಕ್ತಿ ದೊರೆಯಿತು. ಗ್ರಹಣದ ಪರಿಣಾಮ ಬೆಂಗಳೂರು ಬಹುತೇಕ ಕಡೆ ಸ್ತಬ್ಧವಾಗಿ ಜನನಿಬಿಡ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು ವಿಶೇಷವಾಗಿತ್ತು. ಗ್ರಹಣದ ಪರಿಣಾಮವಾಗಿ ನಗರದಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು
ಭಾರತದ ಹಲವೆಡೆ ಗ್ರಹಣ ಗೋಚರವಾಗಿದ್ದು, ಮೊದಲಿಗೆ ಅಮೃತಸರದಲ್ಲಿ ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಯಿತು
ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನೂ ಸಹ ಬಂದ್ ಮಾಡಲಾಗಿತ್ತು. ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನ, ಶಿರಸಿ ಮಾರಿಕಾಂಬ, ಚಾಮುಂಡೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


