ದೇವಿಯ ಆಶೀರ್ವಾದಕ್ಕಾಗಿ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸುತ್ತಾರೆ; ಕುಮಟಾದಲ್ಲೊಂದು ವಿಶಿಷ್ಟ ಧಾರ್ಮಿಕ ಆಚರಣೆ
ಇತ್ತೀಚೆಗೆ ಕನಿಷ್ಠ ಒಂದು ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರತಿವರ್ಷವೂ ಇಲ್ಲೊಂದು ವಿಶೇಷ ಆಚರಣೆ ನಡೆಯುತ್ತದೆ. ಅದು ಪವಾಡವೇ ಸರಿ. ಇಲ್ಲಿಗೆ ಬರುವ ಭಕ್ತರು ಹರಕೆಯನ್ನು ತೀರಿಸಲು ತಮ್ಮ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸುತ್ತಾರೆ.

ಕುಮಟಾ (ಉತ್ತರ ಕನ್ನಡ): ಇಲ್ಲೊಂದು ವಿಶಿಷ್ಟ ಧಾರ್ಮಿಕ ಆಚರಣೆ ಇದೆ. ಈ ದೇವಸ್ಥಾನದಲ್ಲಿ ದೇವರ ಅನುಗ್ರಹಕ್ಕಾಗಿ ಕೋರಿ ಬರುವವರೇ ಅಧಿಕ. ಕುಮಟಾದ ರಾಯೇಶ್ವರಿ ಕಾಮಾಕ್ಷಿ ದೇವಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಇತ್ತೀಚೆಗೆ ಕನಿಷ್ಠ ಒಂದು ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರತಿವರ್ಷವೂ ಇಲ್ಲೊಂದು ವಿಶೇಷ ಆಚರಣೆ ನಡೆಯುತ್ತದೆ. ಅದು ಪವಾಡವೇ ಸರಿ. ಇಲ್ಲಿಗೆ ಬರುವ ಭಕ್ತರು ಹರಕೆಯನ್ನು ತೀರಿಸಲು ತಮ್ಮ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸುತ್ತಾರೆ.
ಇಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿರುತ್ತದೆ. ಪೂಜೆ ಮುಗಿದ ನಂತರ, ಅರ್ಚಕರು ಹೊರಬಂದು ಕುದಿಯುವ ಎಣ್ಣೆ ಮತ್ತು 'ವಡೆ'ಗಳನ್ನು ಹೊಂದಿದ್ದ ಬಾಣಲೆಯ ಸುತ್ತಲೂ ಹೂವುಗಳನ್ನು ಎಸೆಯುತ್ತಾರೆ. ಬಹುನಿರೀಕ್ಷಿತ ಕಾರ್ಯಕ್ರಮವು ಅಲ್ಲಿಗೆ ಪ್ರಾರಂಭವಾಗುತ್ತದೆ. ಕುದಿಯುತ್ತಿರುವ ಎಣ್ಣೆಯಿರುವ ಒಲೆಯ ಮುಂದೆ ವ್ಯಕ್ತಿಯೊಬ್ಬರು ಬರುತ್ತಾರೆ. ದೇವರಿಗೆ ನಮಸ್ಕರಿಸಿದ ನಂತರ, ಅವರು ತಮ್ಮ ಬೆರಳುಗಳನ್ನು ಬಿಸಿ ಎಣ್ಣೆಯಲ್ಲಿ ಮುಳುಗಿಸಿ, ಅದರಲ್ಲಿ ತೇಲುತ್ತಿರುವ ‘ವಡೆ’ಗಳನ್ನು ಹೊರತೆಗೆದು ದೇವರಿಗೆ ಮತ್ತೆ ನಮಸ್ಕರಿಸುತ್ತಾರೆ. ಆಶ್ಚರ್ಯಕರವಾಗಿ, ಅವರಿಗೆ ಯಾವುದೇ ಸುಟ್ಟಗಾಯಗಳು ಆಗಲಿಲ್ಲ.
ಇದನ್ನೂ ಓದಿ: ಕಾನ್ಪುರದಲ್ಲಿ ಲಂಕಾಪತಿ ರಾವಣನಿಗೆಂದೇ ವಿಶೇಷ ದೇವಾಲಯ
ನೂರಾರು ಜನರು ತಮ್ಮ ಹರಕೆ ತೀರಿಸುವುದರೊಂದಿಗೆ ಕಾರ್ಯಕ್ರಮ ನಡೆಯಿತು. ಇದೊಂದು ಪವಾಡ ಎಂದು ಭಕ್ತರು ಹೇಳಿದ್ದು, ಹಿಂದಿನಿಂದಲೂ ಆಚರಣೆಯಲ್ಲಿದೆ. 'ತನ್ನ ಕೈಗಳನ್ನು ಎಣ್ಣೆಯಲ್ಲಿ ಮುಳುಗಿಸಿದವರಿಗೆ ಏನೂ ಆಗದಿದ್ದರೆ, ದೇವಿಯು ಆತನನ್ನು ಅಥವಾ ಆಕೆಯನ್ನು ಆಶೀರ್ವದಿಸಿದ್ದಾಳೆ' ಎಂದರ್ಥ ಎಂದು ಅರ್ಚಕರು ಹೇಳುತ್ತಾರೆ.
ದೇವಿಯ ಆಶೀರ್ವಾದವನ್ನು ಕೋರಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಹರಕೆ ತೀರಿಸುವ ಯಾವುದೇ ವ್ಯಕ್ತಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಈ ವಿಧಿವಿಧಾನ ನೆರವೇರಿಸಿ ತಮ್ಮ ಹರಕೆಯನ್ನು ಪೂರೈಸುತ್ತಾರೆ ಎಂದು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಕ್ತ ರಾಜು ನಾಯ್ಕ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


