ಕೋಲಾರ: ಕೆಂಪೇಗೌಡರ ರಥಯಾತ್ರೆ ಸ್ವಾಗತ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ..!
ಕೆಂಪೇಗೌಡರ ರಥಯಾತ್ರೆ ಸ್ವಾಗತ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ನಲ್ಲಿ ನಡೆದಿದೆ.

ಕೋಲಾರ: ಕೆಂಪೇಗೌಡರ ರಥಯಾತ್ರೆ ಸ್ವಾಗತ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ನಲ್ಲಿ ನಡೆದಿದೆ.
ಮಾಜಿ ಶಾಸಕ ಮಂಜುನಾಥ್ ಗೌಡ, ಹೂಡಿ ವಿಜಯ್ ಕುಮಾರ್ ಬಣಗಳ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಮುಖಂಡ ಹೂಡಿ ವಿಜಯ್‌ಕುಮಾರ್ ನೇತೃತ್ವದ ಒಂದು ಗುಂಪು ಹಾಗೂ ಮಾಜಿ ಶಾಸಕ ಕೋಡಿಹಳ್ಳಿ ಮಂಜುನಾಥ್ ಗೌಡ ನೇತೃತ್ವದಲ್ಲಿ ಮತ್ತೊಂದು ಗುಂಪು ಮಾಲೂರು ತಾಲೂಕಿಗೆ ಯಾತ್ರೆಯನ್ನು ಬರಮಾಡಿಕೊಳ್ಳಲು ಕಾದು ಕುಳಿತಿತ್ತು.
ಎರಡೂ ಗುಂಪುಗಳು ಏಕಕಾಲದಲ್ಲಿ ಯಾತ್ರೆಯನ್ನು ಸ್ವೀಕರಿಸಲು ಯತ್ನಿಸಿದ ಪರಿಣಾಮ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಸಮ್ಮುಖದಲ್ಲಿ ಗದ್ದಲ ಉಂಟಾಯಿತು.
ಈ ವೇಳೆ ಮಂಜುನಾಥ ಗೌಡರು ರಥಯಾತ್ರೆ ವಾಹನವನ್ನು ಏರಿ ಚಾಲಕನನ್ನು ಕೆಳಗೆ ತಳ್ಳಿದ್ದಾರೆ. ಬಳಿಕ ವಿಜಯ್ ಕುಮಾರ್ ಬಣದ ಗುಂಪು ವಾಹನ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗದ್ದಲ ಉಂಟಾಗಿದ್ದು, ಮಧ್ಯೆ ಪ್ರವೇಶಿಸಿದ ಪೊಲೀಸರು ಲಾಠಿಚಾರ್ಚ್ ಮಾಡಿ ಸ್ಥಳದಲ್ಲಿದ್ದ ಗದ್ದಲದ ವಾತಾವರಣ ತಿಳಿಗೊಳ್ಳುವಂತೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


