ವಾರ್ಡ್ ಮರುವಿಂಗಡಣೆ: ಆನ್ ಲೈನ್ ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಇಲ್ಲ ಅವಕಾಶ
ವಾರ್ಡ್ ಮರುವಿಂಗಡಣೆ ಕುರಿತು ನಾಗರಿಕರು ಸಲಹೆ, ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆನ್ಲೈನ್ನಲ್ಲಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರು: ವಾರ್ಡ್ ಮರುವಿಂಗಡಣೆ ಕುರಿತು ನಾಗರಿಕರು ಸಲಹೆ, ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆನ್ಲೈನ್ನಲ್ಲಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ಅವರು, ಬಿಬಿಎಂಪಿ ವೆಬ್ಸೈಟ್ http://bbmpdelimitation2022.com ನಲ್ಲಿ ಅಪ್ಲೋಡ್ ಮಾಡಲಾದ ಕರಡನ್ನು ನಾಗರಿಕರು ಆನ್ಲೈನ್ನಲ್ಲಿ ನೋಡಬಹುದು, ಆದರೆ ಭೌತಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮತ್ತು ಪ್ರತಿಕ್ರಿಯೆಯನ್ನು ವಿಕಾಸ ಸೌಧದ 4 ನೇ ಮಹಡಿಯಲ್ಲಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದರು.
ತಾಂತ್ರಿಕ ಸಮಸ್ಯೆಗಳಿಂದ ಆನ್ಲೈನ್ ಆಯ್ಕೆಯನ್ನು ಮುಚ್ಚಲಾಗಿದೆ: ಬಿಬಿಎಂಪಿ ಚುನಾವಣೆಗೂ, ಪಾಲಿಕೆಗೂ ಯಾವುದೇ ಸಂಬಂಧವಿಲ್ಲದ ಕಾರಣ ಪಾಲಿಕೆ ಪ್ರತಿಕ್ರಿಯೆ ಸ್ವೀಕರಿಸುತ್ತಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಆನ್ಲೈನ್ ಆಯ್ಕೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.
ಹೊಸ ವಾರ್ಡ್ಗಳ ಹೆಸರುಗಳು ಪ್ರದೇಶವನ್ನು ಆಧರಿಸಿಲ್ಲ, ಆದರೆ ರಾಜಕಾರಣಿಗಳು ಮತ್ತು ನಾಯಕರ ಹೆಸರನ್ನು ಏಕೆ ಇಡಲಾಗಿದೆ ಎಂದು ಕೇಳಿದಾಗ, ನಾಗರಿಕರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದು. ಸಮಗ್ರ ತನಿಖೆ ನಂತರ ತಿದ್ದುಪಡಿಗಳನ್ನು ಪರಿಗಣಿಸಲಾಗುವುದು ಎಂದರು.
ವಾರ್ಡ್ ಮರುವಿಂಗಡಣೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು, ಕಂದಾಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ಬೆಂಗಳೂರು ನಗರ ಡಿಸಿ ಸೇರಿದಂತೆ ನಾಲ್ವರು ಸದಸ್ಯರ ಸಮಿತಿಯಿಂದ ಮಾಡಲಾಗಿದೆ. ಆದಾಗ್ಯೂ, ವಾರ್ಡ್ಗಳ ಹೆಸರು ಮತ್ತು ಗಾತ್ರವನ್ನು ನಿರ್ಧರಿಸುವಲ್ಲಿ ರಾಜಕೀಯ ಮುಖಂಡರ ಅಭಿಪ್ರಾಯವಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲಿಲ್ಲ.
ವಾರ್ಡ್ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸುವುದನ್ನು ಒಳಗೊಂಡಿರುವ ವಾರ್ಡ್ ಮರುವಿಂಗಡಣೆ ಕಾರ್ಯದಲ್ಲಿ ಬೈಟರಾಯನಪುರ ಮತ್ತು ಮಹದೇವಪುರದಲ್ಲಿ ಎರಡು ಪ್ರತ್ಯೇಕಿಸಿದ ಸ್ಥಳವನ್ನು ರಚಿಸಲಾಗಿದೆ ಎಂದು ಎಂದು ಆಯುಕ್ತರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


