ಮನೆಗೆಲಸದವರ ಸೋಗಿನಲ್ಲಿ ಮನೆ ದರೋಡೆ ಮಾಡಿದ್ದ ಮೂವರು ಮಹಿಳೆಯರ ಬಂಧನ
ಮನೆ ಕೆಲಸದಾಕೆಯ ಸೋಗಿನಲ್ಲಿ ಮುಂಬೈನ ದುಬಾರಿ ವಸತಿ ಸಮುಚ್ಚಯಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಮಹಿಳೆಯರನ್ನು ಮಹಾರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಲಾಗಿದೆ.

ಬೆಂಗಳೂರು: ಮನೆಗೆಲಸದಾಕೆಯ ಸೋಗಿನಲ್ಲಿ ಮುಂಬೈನ ದುಬಾರಿ ವಸತಿ ಸಮುಚ್ಚಯಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಮಹಿಳೆಯರನ್ನು ಮಹಾರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಲಾಗಿದೆ. ಮುಂಬೈ ಮೂಲದ ಪ್ರಿಯಾಂಕಾ (29), ಮಹಾದೇವಿ (26), ವನಿತಾ (37) ಬಂಧಿತರು. ಪೊಲೀಸರ ಪ್ರಕಾರ, ಈ ಮೂವರು, ಬೆಂಗಳೂರಿನಲ್ಲಿಯೂ ಅದೇ ವಿಧಾನದಲ್ಲಿ ಕಳ್ಳತನ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಅವರು 'ರೆಫರ್ ಹೌಸ್ ಮೇಡ್ಸ್' ನಂತಹ ಸಾಮಾಜಿಕ ಮಾಧ್ಯಮದ ಗುಂಪುಗಳಲ್ಲಿ ಸುಳ್ಳು ಮಾಹಿತಿಯ ತಮ್ಮ ರೆಸ್ಯೂಮ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ ಕೆಲಸಕ್ಕಾಗಿ ಸಂಪರ್ಕಿಸಿದ್ದಾರೆ. ಕೆಲಸಕ್ಕೆ ಸೇರಿದ ಕೆಲ ದಿನಗಳ ನಂತರ ಅವರು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಮುಂಬೈನಲ್ಲಿ ರೈಲುಗಳಿಂದ ಕದ್ದ ಮೊಬೈಲ್ ಫೋನ್‌ಗಳ ಸಿಮ್ ಕಾರ್ಡ್‌ಗಳನ್ನು ಸಹ ಈ ಕೆಲಸಕ್ಕೆ ಅವರು ಬಳಸಿದ್ದಾರೆ.
ಮೂವರಲ್ಲಿ ಮಹಾದೇವಿ ಹೆಣ್ಣೂರಿನ ಮನೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆಕೆ ದಕ್ಷಿಣ ಕನ್ನಡದ ಸುಬ್ಬಲಕ್ಷ್ಮಿ ಎಂದು ನಕಲಿ ಆಧಾರ್ ಕಾರ್ಡ್ ನೀಡಿದ್ದಳು. ಆರೋಪಿಯು ಮೇ 3ರಂದು ಕೆಲಸ ಆರಂಭಿಸಿದ್ದು, ಮೇ 6ರಂದು ಇನ್ನಿಬ್ಬರ ಸಹಾಯದಿಂದ ಮನೆ ಮಾಲೀಕ ಅರವಿಂದ್ ಹೊರಗೆ ಹೋಗಿದ್ದ ವೇಳೆ ಕಳ್ಳತನ ಮಾಡಿದ್ದಾಳೆ. 250 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ನಾಣ್ಯಗಳೊಂದಿಗೆ ಮೂವರು ಪರಾರಿಯಾಗಿದ್ದರು.
“ಮಹಾದೇವಿ ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ದೂರುದಾರರಿಗೆ ನೀಡಿದ್ದಳು. ಆಕೆ ತಪ್ಪಿಸಿಕೊಂಡ ನಂತರ, ಪೋಲೀಸರಿಗೆ ಕರೆ ಮಾಡಿದಾಗ, ಫೋನ್ ಮುಂಬೈನಲ್ಲಿ ಕಳ್ಳತನವಾಗಿದೆ ಎಂಬುದು ತಿಳಿದುಬಂತು. ಮುಂಬೈನಲ್ಲಿ ಮಹಿಳೆಯರನ್ನು ಬಂಧಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಅವರ ಸ್ವವಿವರಗಳ ಆಧಾರದ ಮೇಲೆ ಅವರ ಸುಳಿವು ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿಭಿನ್ನ ಗುರುತುಗಳನ್ನು ಬಳಸುತ್ತಿದ್ದರು. ಕಿಂಗ್‌ಪಿನ್ ವನಿತಾ. ಇನ್ನಿಬ್ಬರು ವನಿತಾ ಸೂಚನೆಯಂತೆ ನಡೆದುಕೊಳ್ಳುತ್ತಿದ್ದರು. ಅವರು ಅಪಾರ್ಟ್‌ಮೆಂಟ್‌ಗಳ ವಾಚ್‌ಮೆನ್‌ಗಳನ್ನು ಸಂಪರ್ಕಿಸಿ ಮನೆಗೆಲಸದವರ ಅವಶ್ಯಕತೆ ಇದೆಯೇ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


