ಬಿಎಚ್ ನೋಂದಣಿಯಲ್ಲಿ ಖಾಸಗಿ ವಲಯದ ಸಿಬ್ಬಂದಿಗಳ ವಾಹನಗಳನ್ನೂ ನೋಂದಾಯಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಆಗಸ್ಟ್ 26 ರಂದು ಹೊರಡಿಸಲಾದ ಕೇಂದ್ರ ಮೋಟಾರು ವಾಹನಗಳ (20 ನೇ ತಿದ್ದುಪಡಿ) ನಿಯಮಗಳು 2021 ರ ಪ್ರಕಾರ ಖಾಸಗಿ ವಲಯದ ಉದ್ಯೋಗಿಗಳ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಲ್ಲಿ ನೋಂದಾಯಿಸುವಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಬೆಂಗಳೂರು: ಆಗಸ್ಟ್ 26 ರಂದು ಹೊರಡಿಸಲಾದ ಕೇಂದ್ರ ಮೋಟಾರು ವಾಹನಗಳ (20 ನೇ ತಿದ್ದುಪಡಿ) ನಿಯಮಗಳು 2021 ರ ಪ್ರಕಾರ ಖಾಸಗಿ ವಲಯದ ಉದ್ಯೋಗಿಗಳ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಲ್ಲಿ ನೋಂದಾಯಿಸುವಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟಿ ಶಾಲಿನಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಸಿಎಂ ಪೂಣಚ್ಚ ಈ ಆದೇಶ ನೀಡಿದ್ದಾರೆ.
ಡಿಸೆಂಬರ್ 20, 2021 ರಂದು ಸಾರಿಗೆ ಇಲಾಖೆಯ ಸುತ್ತೋಲೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಾಹನಗಳನ್ನು ಬಿಎಚ್ ಸರಣಿಯಲ್ಲಿ ನೋಂದಣಿ ನಿರಾಕರಿಸಿದ ಹಿನ್ನೆಲೆಯಲ್ಲಿ ಶಾಲಿನಿಯವರು ನ್ಯಾಯಾಲಯದ ಮೊರೆ ಹೋಗಿದ್ದರು.
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನಗಳನ್ನು ಒಯ್ಯಬೇಕಾದ ಸಂದರ್ಭ ಬಂದಾಗ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಭಾರತ್ ಸರಣಿ ಅಥವಾ ಬಿಎಚ್ ಸರಣಿಯ ನೋಂದಣಿ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿತ್ತು.
2021ರ ಆಗಸ್ಟ್ನಲ್ಲಿ ಬಿಎಚ್ ಸರಣಿಯ ನೋಂದಣಿಗೆ ನಿಯಮ ರೂಪಿಸಲಾಗಿದ್ದು, ಸೆಪ್ಟೆಂಬರ್ನಿಂದ ಬಿಎಚ್ ನಂಬರ್ ಪ್ಲೇಟ್ ನೀಡಲು ಆರಂಭಿಸಿತ್ತು. ಈವರೆಗೆ ಹೊಸದಾಗಿ ಖರೀದಿಸಲ್ಪಡುವ ವಾಹನಗಳಿಗಷ್ಟೇ ಬಿಎಚ್ ನೋಂದಣಿ ಮಾಡಲಾಗುತ್ತಿತ್ತು. ಹೊಸ ನಿಯಮದಡಿ ನೋಂದಣಿಯಾಗುವ ವಾಹನಗಳನ್ನು ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ನೋಂದಣಿ ಮಾಡಬೇಕಾದ ಸಂದರ್ಭ ಬಂದರೆ ಉಚಿತವಾಗಿ ಮಾಡಬಹುದು ಎಂದು ಸರ್ಕಾರ ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


