ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 4.8 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ಹಿಂದಿರುಗಿಸಿದ ಪ್ರಾಮಾಣಿಕ ಹಮಾಲಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 100 ಗ್ರಾಂ ಚಿನ್ನವಿದ್ದ ಬಾಕ್ಸ್‌ವೊಂದನ್ನು ಕಳೆದುಕೊಂಡಿದ್ದ ಮಹಿಳಾ ಪ್ರಯಾಣಿಕರೊಬ್ಬರು, ವ್ಯಕ್ತಿಯೊಬ್ಬರ ಪ್ರಾಮಾಣಿಕತೆಯಿಂದಾಗಿ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ಪಡೆದಿದ್ದಾರೆ. ಈ ಚಿನ್ನದ ಮೌಲ್ಯ ಸುಮಾರು 4.8 ಲಕ್ಷ ರೂ. ಆಗಿದೆ.

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 100 ಗ್ರಾಂ ಚಿನ್ನವಿದ್ದ ಬಾಕ್ಸ್‌ವೊಂದನ್ನು ಕಳೆದುಕೊಂಡಿದ್ದ ಮಹಿಳಾ ಪ್ರಯಾಣಿಕರೊಬ್ಬರು, ವ್ಯಕ್ತಿಯೊಬ್ಬರ ಪ್ರಾಮಾಣಿಕತೆಯಿಂದಾಗಿ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ಪಡೆದಿದ್ದಾರೆ. ಈ ಚಿನ್ನದ ಮೌಲ್ಯ ಸುಮಾರು 4.8 ಲಕ್ಷ ರೂ. ಆಗಿದೆ.
ಪರವಾನಗಿ ಪಡೆದ ಪೋರ್ಟರ್ (ರೈಲು ಸಹಾಯಕ) ಮೊಹಮ್ಮದ್ ಇಜಾಜ್ ಎಂಬುವವರು ನಿಲ್ದಾಣದಲ್ಲಿ ಬಾಕ್ಸ್ ಅನ್ನು ಕಂಡು ಅದನ್ನು ಉಪ ನಿಲ್ದಾಣದ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬಾಕ್ಸ್‌ನ ಮಾಲೀಕರಾದ ಸಂಗೀತಾ ಎಂಬುವವರು ತನ್ನ ಕುಟುಂಬದೊಂದಿಗೆ ತಾಳಗುಪ್ಪಾ-ಮೈಸೂರು ಎಕ್ಸ್‌ಪ್ರೆಸ್‌ನಿಂದ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಳಿದಿದ್ದರು. ಕುಟುಂಬವು ಅಲ್ಲಿಂದ ಬಂಗಾರಪೇಟೆಗೆ ಸಂಪರ್ಕ ರೈಲಿನಲ್ಲಿ ಹೋಗಲು ಯೋಜಿಸಿತ್ತು. ಈ ವೇಳೆ ಸುಮಾರು ಎರಡ್ಮೂರು ಗಂಟೆಗಳ ಕಾಲ ಪ್ಲಾಟ್‌ಫಾರ್ಮ್ 10 ರಲ್ಲಿ ಕಾದು ಕುಳಿತಿದ್ದರು. ನಂತರ ಮುಂದಿನ ರೈಲಿಗೆ ತೆರಳಲು ಅವರು ಪ್ಲಾಟ್‌ಫಾರ್ಮ್ 6 ಕ್ಕೆ ಬಂದರು.
ಈ ವೇಳೆ ಆಕೆ ತನ್ನ ಬ್ಯಾಗ್‌ನ ಪಕ್ಕದ ಜೇಬಿನಲ್ಲಿ ಇಟ್ಟಿದ್ದ ಚಿನ್ನವಿದ್ದ ಬಾಕ್ಸ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಸಹಾಯಕ್ಕಾಗಿ ಸಿಟಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಹಮಾಲಿಯಿಂದ ಬಾಕ್ಸ್ ಅನ್ನು ಪಡೆದಿದ್ದ ರೈಲ್ವೆ ಅಧಿಕಾರಿ, ರೈಲ್ವೆ ರಕ್ಷಣಾ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ರೈಲ್ವೆ ಪೊಲೀಸರ ಸಮ್ಮುಖದಲ್ಲಿ ಬಾಕ್ಸ್‌ನ ನಿಜವಾದ ಮಾಲೀಕರಿಗೆ ಅದನ್ನು ಹಸ್ತಾಂತರಿಸಲಾಗಿದೆ.
ಇದರಿಂದಾಗಿ ಪ್ರಯಾಣಿಕರು ಇಡೀ ರೈಲ್ವೆ ತಂಡಕ್ಕೆ, ವಿಶೇಷವಾಗಿ ಇಜಾಜ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚಿನ್ನವಿದ್ದ ಬಾಕ್ಸ್ ಅನ್ನು ಹಿಂತಿರುಗಿಸಿದ್ದ ಇಜಾಜ್ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


