ಪುನೀತ್ ರಾಜ್ ಕುಮಾರ್ ನಿಧನ: ಡಾ. ರಮಣರಾವ್ ವಿರುದ್ಧ ಮತ್ತೊಂದು ದೂರು
ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ಹಿನ್ನಲೆಯಲ್ಲಿ ಡಾ.ರಮಣ ರಾವ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ಹಿನ್ನಲೆಯಲ್ಲಿ ಡಾ.ರಮಣ ರಾವ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಕನ್ನಡಪರ ಚಿಂತಕ ಡಾ.ಆರ್.ಎ. ಪ್ರಸಾದ್ ಅವರು ಸದಾಶಿವನಗರ ಠಾಣೆಯಲ್ಲಿ ದೂರು ದೂಖಲು ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರ ನಿವಾಸದ ಹತ್ತಿರದಲ್ಲಿರುವ ಎಂ ಎಸ್ ರಾಮಯ್ಯಗೆ ಕಳಿಸದೇ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಿದ್ಯಾಕೆ ಎಂದು ಪ್ತಶ್ನಿಸಿದ್ದಾರೆ.
ಹೃದಯಾಘಾತ ಸೂಚನೆ ಕಂಡರೂ ಎಂ ಎಸ್ ರಾಮಯ್ಯ ಹೃದಯ ಘಟಕಕ್ಕೆ ದಾಖಲು ಮಾಡಿಲ್ಲ. ಹೀಗಾಗಿ ವೈದ್ಯರು ನಿರ್ಲಕ್ಷ್ಯ ಮಾಡುವುದರ ಮೂಲಕ ವೃತ್ತಿಗೆ ಕರ್ತವ್ಯಲೋಪ ಎಸಗಿರೋದಾಗಿ ದೂರಿನಲ್ಲಿ ಆಪಾದಿಸಲಾಗಿದೆ. ಸ್ಲೋ ಪಾಯಿಜನ್ ಆಗಿರುವ ಸಾಧ್ಯತೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ನಿಗೂಢ ಸಾವಿಗೆ ಕಾರಣವೇನೆಂದು ತಿಳಿಯಲು ಕಾನೂನಾತ್ಮಕ ತನಿಖೆ ನಡೆಸಬೇಕೆಂದು ಹೇಳಲಾಗಿದೆ.
ಡಾ. ರಮಣ ರಾವ್ ವಿರುದ್ಧ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ನಿವಾಸಕ್ಕೆ, ಹಾಗೂ ಕ್ಲಿನಿಕ್ ಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: 'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್
ವೈದ್ಯರ ವಿರುದ್ಧ ದೂರು, ಸಿಎಂಗೆ ಪತ್ರ ಬರೆದಿದ್ದ ಫನಾ
ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಿದ್ದ ವೈದ್ಯ ರಮಣರಾವ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನ ನಡೆಯುತ್ತಿರುವ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟವು (ಫನಾ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಗಮನ ಸೆಳೆದಿತ್ತು.
ಸಾವಿನ ಬಗ್ಗೆ ಚರ್ಚೆಯಿಂದ ವೈದ್ಯಕೀಯ ಗೌಪ್ಯತೆ ಉಲ್ಲಂಘನೆಯಾಗುತ್ತಿದೆ. ಈ ವಿಚಾರದಲ್ಲಿ ಎಫ್ಐಆರ್ ಅಥವಾ ಪಿಸಿಆರ್ ದಾಖಲಿಸುವ ಮುನ್ನ ಸುಪ್ರೀಂಕೋರ್ಟ್ ರೂಪಿಸಿರುವ ನಿಯಮಾವಳಿಗಳನ್ನು ಗಮನಿಸಬೇಕು ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ಹೇಳಿದ್ದರು.
Related Article
ಪುನೀತ್ ಪುಣ್ಯ ಸ್ಮರಣೆ: ಸಮಾಧಿ ಬಳಿ ಕುಟುಂಬದವರಿಂದ 11ನೇ ದಿನದ ಪೂಜೆ
ಅಪ್ಪನ ಅಗಲಿಕೆಯ ನೋವಲ್ಲಿ ಪರೀಕ್ಷೆ ಬರೆಯಲಿದ್ದಾರೆ ಪುನೀತ್ ರಾಜಕುಮಾರ್ ಪುತ್ರಿ !
ದೊಡ್ಮನೆ ಕುಡಿ ಅಪ್ಪುವಿನ ಅಕಾಲಿಕ ಮರಣದ ನೋವು: ಪುನೀತ್ ಕುಟುಂಬದ ವೈದ್ಯರಿಗೆ ಭದ್ರತೆ
ಭಾನುವಾರ ಪುನೀತ್ ಸಮಾಧಿಗೆ ಅಪಾರ ಅಭಿಮಾನಿಗಳ ಭೇಟಿ, ಗೌರವ ನಮನ- ವಿಡಿಯೋ
ಪುನೀತ್ ರಾಜ್ ಕುಮಾರ್ ಕುಟುಂಬದಿಂದ 2 ಸಾವಿರ ಜನರಿಗೆ ಅನ್ನ ಸಂತರ್ಪಣೆ
ಪುನೀತ್ ಸಮಾಧಿ ಎದುರು ವಿವಾಹವಾಗಲು ಮುಂದಾದ ಜೋಡಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


