ಬೆಂಗಳೂರಿನಲ್ಲಿ ಆಟೋ ಪ್ರಯಾಣ ದುಬಾರಿ, ಕನಿಷ್ಠ ದರ 25 ರಿಂದ 30 ರೂ. ಗೆ ಏರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಲಾಗಿದ್ದು, ನಗರದಲ್ಲಿ ಕನಿಷ್ಠ ಆಟೋ ದರವನ್ನು(ಎರಡು ಕಿಲೋಮೀಟರ್ ಗೆ) 25 ರೂಪಾಯಿಂದ 30 ರೂಪಾಯಿಗೆ ಹೆಚ್ಚಿಸಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಲಾಗಿದ್ದು, ನಗರದಲ್ಲಿ ಕನಿಷ್ಠ ಆಟೋ ದರವನ್ನು(ಎರಡು ಕಿಲೋಮೀಟರ್ ಗೆ) 25 ರೂಪಾಯಿಂದ 30 ರೂಪಾಯಿಗೆ ಹೆಚ್ಚಿಸಲಾಗಿದೆ.
ಮೊದಲ ಎರಡು ಕಿಲೋಮೀಟರ್ ಗೆ 30 ರುಪಾಯಿ ನಿಗದಿ ಮಾಡಿದ್ದು, ನಂತರ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ಹೆಚ್ಚುವರಿ ದರ ನಿಗದಿಯಾಗಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದೆ.
20 ಕೆಜಿ ಮೇಲ್ಪಟ್ಟ ಲಗೇಜ್‌ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ. ಪರಿಷ್ಕೃತ ದರ ಹೆಚ್ಚಳದ ಕುರಿತು ಮೀಟರ್ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್ಗಳನ್ನ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ. ಅಷ್ಟರೊಳಗೆ ಮೀಟರ್ ಬದಲಾವಣೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿದೆ.

ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರ ಹೆಚ್ಚಳವಾಗಿದೆ. ಈ ದರ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಅನ್ವಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿರುವ ನಿಗದಿತ ದರದ ಪಟ್ಟಿಯನ್ನು ಎಲ್ಲಾ ಆಟೋ ಚಾಲಕರು ಆಟೋದ ಪ್ರಮುಖ ಸ್ಥಳದಲ್ಲಿ ಅಂಟಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


