2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ನಿಷೇಧ ಮಸೂದೆ ಸಿದ್ಧಪಡಿಸಲಾಗಿತ್ತು: ಕಾನೂನು ಸಚಿವ ಮಾಧುಸ್ವಾಮಿ
2016ರಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ಕೇಳಿ ಕಾನೂನು ಆಯೋಗ ಒಂದು ಮಸೂದೆಯನ್ನು ಸಿದ್ದಪಡಿಸಿತ್ತು. ಆ ಮಸೂದೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ತಂದು ಸ್ಕ್ರುಟಿನಿಯಾಗಿ ಆಕಸ್ಮಿಕವಾಗಿ ಸಚಿವ ಸಂಪುಟ ಮುಂದೆ ಹೋಗಿರಲಿಲ್ಲ.

ಬೆಳಗಾವಿ: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಲಾ ಕಮೀಷನ್ ಒಂದು ಕರಡು ಮಸೂದೆ ಸಿದ್ಧಗೊಳಿಸುತ್ತಾರೆ ಅದರಲ್ಲಿ ಈಗ ತರಲು ಉದ್ದೇಶಿರುವ ಮತಾಂತರ ನಿಷೇಧ ಮಸೂದೆಯ ಬಹುತೇಕ ಅಂಶಗಳು ಇದ್ದವು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಪ್ರತಿಪಾದಿಸಿದರು.
ಅವರಿಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಆರಂಭಿಕವಾಗಿ ಕರ್ನಾಟಕ ಕಾನೂನು ಕಮಿಷನ್ ಸಿದ್ಕಧಪಡಿಸಿದ ಕರಡಿನಲ್ಲಿದ್ದ ವಿಷಯಗಳ ಜೊತೆಗೆ ಪೂರಕವಾಗಿ ಎರಡ್ಮೂರು ಅಂಶಗಳನ್ನು ಬಿಜೆಪಿ ಸರ್ಕಾರ ಸೇರಿಸಿದೆ. ಈ ಬಿಲ್ ಅಸಂವಿಧಾನಿಕ ಅಂತಾ ಹೇಳಲು ಆಗಲ್ಲ. ಬಲವಂತದ ಮತಾಂತರದಿಂದಾಗಿ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಇದನ್ನು ನಿಗ್ರಹಿಸಬೇಕಾಗಿದೆ. ಸಂವಿಧಾನದಲ್ಲಿ ಬಲವಂತ, ಆಮಿಷ, ಅಕ್ರಮ, ಯಾವುದೇ ಧರ್ಮವನ್ನು ಅವಹೇಳ ಮಾಡಬಾರದೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ, ಈ ತಪ್ಪಿಗೆ ಶಿಕ್ಷೆಗಳ ಬಗ್ಗೆ ಸರ್ಕಾರ ಕ್ರಮಕೈಗೊಂಡಿರಲಿಲ್ಲ. ಯಾವುದೇ ವ್ಯಕ್ತಿ ಮತಾಂತರವಾಗಬೇಕಾದರೆ ಸ್ವತಂತ್ರನಾಗಿರಬೇಕು. ಆತ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡಿರಬಾರದು. ಇದರಿಂದ ಸಮಾಜದಲ್ಲಿ ಘರ್ಷಣೆ, ತಿಕ್ಕಾಟವಾಗಬಾರದು. ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ಸೇರಬಹುದು, ಆರಾಧಿಸಬಹುದು. ಮತಾಂತರ ಬಲವಂತದಿಂದಾಗಿ ಆಗಿದ್ಯಾ ಇಲ್ಲವಾ ಅನ್ನೋದು ಬೇಕು. ಬಲವಂತದಿಂದ ಮತಾಂತರ ಆದರೆ, ಅದಕ್ಕೆ ಏನು ಮಾಡಬೇಕು ಅನ್ನೋದರ ಬಗ್ಗೆ ಈ ಬಿಲ್ ನಲ್ಲಿ ಅಂಶಗಳನ್ನು ಅಡಕ ಮಾಡಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಈ ಬಿಲ್ ಆರಂಭಗೊಂಡಿತ್ತು ಅನ್ನೋ ಮಾತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮತ್ತೆ ಮಾತನಾಡಿದ ಮಾಧುಸ್ವಾಮಿ ಅವರು ಕರ್ನಾಟಕ ಕಾನೂನು ಕಮಿಷನ್ ನಲ್ಲಿ ಸದಸ್ಯರು ಹಾಗೂ ಎಜಿ ಮುಂದೆ ಈ ಡ್ರಾಫ್ಟ್ ಬಿಲ್ ಸಿದ್ಧಗೊಂಡು ಸ್ಪೂಟ್ನಿ ಆಗಿತ್ತು. ಈ ಬಗ್ಗೆ ನನ್ನ ಬಳಿ ಆಗಿನ ಸರ್ಕಾರ ಸ್ಪೂಟ್ನಿ ಮಾಡಿರುವ ದಾಖಲಾತಿ ಇದೆ ಎಂದು ಹೆಚ್ಚಿನ ಮಾಹಿತಿ ನೀಡಿದರು. ಈಗಿನ ಸರ್ಕಾರ ಸಂವಿಧಾನದ ಚೌಕಟ್ಟಿನೊಳಗೆ ಮತಾಂತರ ನಿಷೇಧ ಮಸೂದೆ ತರಲು ಹೊರಟಿದೆ. ಇದು ಯಾವುದೇ ರೀತಿಯ ಅಸಂವಿಧಾನಿಕ ಅಂಶಗಳನ್ನು ಹೊಂದಿಲ್ಲ. ಬಲವಂತದಿಂದಾಗುವ ಮತಾಂತರವನ್ನು ತಡೆಯುವುದು ಹಾಗೂ ಶಿಕ್ಷೆಗೆ ಗುರಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಪುನರುಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಶೀಲನೆಗೆ ಸೂಚಿಸಿರುವ ದಾಖಲೆ ತೋರಿಸುವಂತೆ ಪಟ್ಟು ಹಿಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


