ಕರ್ನಾಟಕ ಜಿಎಸ್ ಟಿ ಸಂಗ್ರಹದಲ್ಲಿ ದಾಖಲೆ ಏರಿಕೆ, ಕಳೆದ ವರ್ಷಕ್ಕಿಂತ ಶೇ.31ರಷ್ಟು ಹೆಚ್ಚಳ
ಕರ್ನಾಟಕದಲ್ಲಿ ಜಿಎಸ್ಟಿ ಸಂಗ್ರಹವು ಪ್ರಬಲ ಏರಿಕೆ ಕಂಡಿದ್ದು, ಶೇ.31ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕರ್ನಾಟಕದಲ್ಲಿ ಜಿಎಸ್ಟಿ ಸಂಗ್ರಹವು ಪ್ರಬಲ ಏರಿಕೆ ಕಂಡಿದ್ದು, ಶೇ.31ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 2021 ರಲ್ಲಿ ಸುಮಾರು 8,200 ಕೋಟಿ ರೂ.ಗಳು ಜಿಎಸ್ ಟಿ ಸಂಗ್ರಹವಾಗಿದ್ದರೆ, ನವೆಂಬರ್ 30, 2021 ರ ವೇಳೆಗೆ ರೂ. 9,048 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ 6,915 ಕೋಟಿ ರೂ ಸಂಗ್ರಹವಾಗಿತ್ತು. ಇದು ಶೇ. 31 ರಷ್ಟು ಏರಿಕೆಯಾಗಿದೆ.
ದೇಶ ಮತ್ತು ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರ ಭೀತಿ ಇರುವಂತೆಯೇ ಜಿಎಸ್ಟಿ ಸಂಗ್ರಹಣೆ ಏರುಗತಿಯಲ್ಲಿರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂಲಭೂತ ಅಂಶಗಳು ಪ್ರಬಲವಾಗಿದ್ದು, ಬೆಳವಣಿಗೆ ದರ ಮುಂದುವರಿದರೆ ಮುಂದಿನ ವರ್ಷದ ಡಿಸೆಂಬರ್ ಅಥವಾ ಜನವರಿಯಲ್ಲಿ ಜಿಎಸ್ಟಿ ಸಂಗ್ರಹಗಳು 10,000 ಕೋಟಿ ರೂಪಾಯಿಗಳ ಸಮೀಪ ಬರಬಹುದು ಎಂದು ಅವರು ಹೇಳಿದ್ದಾರೆ.
ತೆರಿಗೆ ವಂಚಕರ ಮೇಲೆ ತೀವ್ರ ನಿಗಾ
ಇನ್ನು ತೆರಿಗೆ ವಂಚಕರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಈ ಬಗ್ಗೆ ಮಾತನಾಡಿರುವ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಆರ್.ಎಸ್.ದೇಶಪಾಂಡೆ ಅವರು, ವ್ಯಾಪಾರದಲ್ಲಿನ ಸುಧಾರಣೆಯಿಂದಾಗಿ ಮಧ್ಯಮ ಶ್ರೇಣಿಯ ಜಿಎಸ್ಟಿ ಸಂಗ್ರಹ ಪ್ರಮಾಣವು ದೊಡ್ಡದಾಗಿದೆ ಎಂಬುದು ನಿಜ. ಆದರೆ ಉನ್ನತ ಮಟ್ಟದ ರಿಯಲ್ ಎಸ್ಟೇಟ್ ವಲಯದಿಂದ ಜಿಎಸ್ಟಿ ಸಂಗ್ರಹವು ನಿರೀಕ್ಷಿತ ಮಟ್ಟದಲ್ಲಿಲ್ಲ ಮತ್ತು ಅದು ಬೆಳೆಯಲು ಹೆಚ್ಚಿನ ಉತ್ತೇಜನದ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಜಿಎಸ್ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ಮಾತನಾಡಿ, ತೆರಿಗೆ ಅನುಸರಣೆ ಉತ್ತೇಜನಕಾರಿಯಾಗಿದೆ. ವರ್ಕ್ ಫ್ರಮ್ ಹೋಮ್ ಗೆ ಬಿಡುವು ನೀಡಲಾಗಿದೆ. ಹಬ್ಬದ ಸೀಸನ್, ವ್ಯಾಪಾರ ಮತ್ತು ಸೇವಾ ಚಟುವಟಿಕೆಯಲ್ಲಿ ಸಮಂಜಸವಾದ ಹೆಚ್ಚಳ, ಬಾಕಿ ರಿಟರ್ನ್ಸ್ ಸಲ್ಲಿಸುವಲ್ಲಿ ಅನುಸರಣೆಯನ್ನು ಸುಧಾರಿಸುವ ಕ್ರಮಗಳು ಮತ್ತು ಗ್ರಾಹಕರಿಂದ ಖರೀದಿ ಆಯ್ಕೆಗಳಲ್ಲಿ ಸುಧಾರಣೆ ಸುಧಾರಿತ GST ಸಂಗ್ರಹಣೆಗೆ ಪೂರಕವಾದ ಕೆಲವು ಅಂಶಗಳಾಗಿವೆ ಎಂದು ಹೇಳಿದ್ದಾರೆ.
ವಾಣಿಜ್ಯ ತೆರಿಗೆ ಅಯುಕ್ತರಾದ ಸಿ ಶಿಖಾ ಅವರು ಮಾತನಾಡಿ, 'ವ್ಯವಹಾರವನ್ನು ಸುಲಭಗೊಳಿಸಲು ತೆರಿಗೆ ಸುಧಾರಣೆಗಳು ಹೆಚ್ಚಿನ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತವೆ. ತೆರಿಗೆ ಪಾವತಿ ತಪ್ಪಿಸಿಕೊಳ್ಳುವಿಕೆಯನ್ನು ಪತ್ತೆಹಚ್ಚುವ ಪ್ರಯತ್ನಗಳು ಸಹಾಯ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಾರಿ ತಂಡಗಳು ವಂಚಕರು ಮತ್ತು ವಂಚನೆಯ ಘಟನೆಗಳ ಮೇಲೆ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


