ವಿದೇಶದಲ್ಲಿ ಉದ್ಯೋಗದ ಆಮಿಷ: ನಕಲಿ ಉದ್ಯೋಗ ಸಂಸ್ಥೆಗಳಿಂದ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ದುರುಪಯೋಗ
ಎಲ್ಲರಿಗೂ ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಸಂಪಾದಿಸುವ ಆಸೆ. ಅದನ್ನು ಬಳಸಿಕೊಳ್ಳುವ ನಕಲಿ ಉದ್ಯೋಗ ಸಂಸ್ಥೆಯ ವಂಚಕರು, ಆಫೀಸ್ ಬಾಯ್ ಆಗಿದ್ದವರಿಗೆ ಮ್ಯಾನೇಜರ್ ಹುದ್ದೆ ಕೊಡಿಸುವ ಆಮಿಷ ಒಡ್ಡುತ್ತಾರೆ. ಅದಕ್ಕೆ ಕೊರೊನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಅಮಾಯಕರು ಬಲಿಯಾಗುತ್ತಿದ್ದಾರೆ.

ಬೆಂಗಳೂರು: ಸದ್ಯದ ಕೊರೊನಾ ಸಾಂಕ್ರಾಮಿಕದಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದೇ ಪರಿಸ್ಥಿತಿಯನ್ನು ನಕಲಿ ವಿದೇಶಿ ಉದ್ಯೋಗ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ರಾಜ್ಯ ವಲಸಿಗರ ರಕ್ಷಣಾ ಕಚೇರಿ ಎಚ್ಚರಿಕೆ ನೀಡಿದೆ. ಅಮಾಯಕರನ್ನು ವಂಚಿಸಲೆಂದೇ ನೂರಾರು ನಕಲಿ ಉದ್ಯೋಗಾವಕಾಶ ಸಂಸ್ಥೆಗಳು ಸೃಷ್ಟಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದು, ಉದ್ಯೋಗ ನೀಡದೆ ವಂಚನೆ ನಡೆಸಲಾಗುತ್ತಿದೆ.
ಇಂಥಾ ನಕಲಿ ಉದ್ಯೋಗ ಸಂಸ್ಥೆಗಳ ಮೇಲೆ ಬೆಂಗಳೂರಿನಲ್ಲಿರುವ ರಾಜ್ಯ ವಲಸಿಗರ ರಕ್ಷಣಾ ಕಚೇರಿ ನಿಗಾ ಇರಿಸಿದೆ. ಇತ್ತೀಚಿಗಷ್ಟೆ ಕಚೇರಿಯ ಅಧಿಕಾರಿಗಳು ತಮ್ಮ ಗಮನಕ್ಕೆ ಬಂದಿರುವ ನಕಲಿ ಉದ್ಯೋಗ ಸಂಸ್ಥೆಗಳ ಪಟ್ಟಿಯನ್ನು ನಗರ ಪೊಲೀಸ್ ಆಯುಕ್ತರಿಗೆ ತಲುಪಿಸಿದೆ. ಪೊಲೀಸರು ವಿವಿಧ ಇಲಾಖೆಗಳ ಸಹಾಯದಿಂದ ಅಕ್ರಮ ಉದ್ಯೋಗ ಏಜೆನ್ಸಿಗಳ ಪತ್ತೆಗಾಗಿ ಜಾಲ ಬೀಸಿದೆ.
ಮಂಗಳೂರು ನಗರ ಪೊಲೀಸರು ನಗರದಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಉದ್ಯೋಗ ಸಂಥೆಗಳ ಮಾಹಿತಿಯನ್ನು ಸಾರ್ವಜನಿವಾಗಿ ಬಹಿರಂಗಗೊಳಿಸಿದ್ದರು. ಆ ನಂತರ ಹಲವು ಉದ್ಯೋಗ ಸಂಸ್ಥೆಗಳಿಂದ ವಂಚನೆಗೊಳಗಾದ ನೂರಾರು ಮಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಗ್ಯಾಂಗ್ ಒಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು ತಿಳಿದುಬಂದಿತ್ತು. ಈ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು. ಈ ತಂಡದ ಸದಸ್ಯರು ಅಭ್ಯರ್ಥಿಗಳಿಗೆ ಆಸ್ಟ್ರೇಲಿಯ ಮತ್ತು ಲಿಥುವೇನಿಯಾ ದೇಶಗಳಲ್ಲಿ ನರ್ಸಿಂಗ್ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಹಣ ಪಡೆದು ಪರಾರಿಯಾಗುತ್ತಿದ್ದರು.
ಎಲ್ಲರಿಗೂ ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಸಂಪಾದಿಸುವ ಆಸೆ ಇರುತ್ತದೆ. ಅದನ್ನು ಬಳಸಿಕೊಳ್ಳುವ ನಕಲಿ ಉದ್ಯೋಗ ಸಂಸ್ಥೆಯ ವಂಚಕರು, ಆಫೀಸ್ ಬಾಯ್ ಆಗಿದ್ದವರಿಗೆ ಮ್ಯಾನೇಜರ್ ಹುದ್ದೆ ಕೊಡಿಸುವ ಆಮಿಷ ಒಡ್ಡುತ್ತಾರೆ. ಅದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


