fake

IAS ಅಧಿಕಾರಿಯಂತೆ ನಟನೆ: 'ಭಾರತ ಸರ್ಕಾರ' ಪ್ಲೇಟ್ ಕಾರಿನಲ್ಲಿ ಪ್ರಯಾಣ; ವ್ಯಕ್ತಿ ಬಂಧನ
'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕ ಹೊಂದಿರುವ ಕಾರಿನಲ್ಲಿ ಆತ ಓಡಾಡುತ್ತಿದ್ದ ಎಂದು ಅಧಿಕಾರಿ ಹೇಳಿದರು. ರಸ್ತೆ ನಿಯಮ ಉಲ್ಲಂಘನೆಗಾಗಿ ದಾದರ್‌ನಲ್ಲಿ ಸಂಚಾರಿ ಕಾನ್‌ಸ್ಟೆಬಲ್ ಒಬ್ಬರು ಆ ವ್ಯಕ್ತಿಯನ್ನು ತಡೆದಿದ್ದರು.

ಪಹಲ್ಗಾಮ್ ದಾಳಿ ನಂತರ ಸೇನಾ ಕಮಾಂಡರ್ 'ತೆಗೆದುಹಾಕಲಾಗಿದೆ' ಎಂಬುದು ಫೇಕ್: ಸರ್ಕಾರ ಸ್ಪಷ್ಟನೆ
ಜನರಲ್ ಸುಚೀಂದ್ರ ಕುಮಾರ್ ಅವರನ್ನು ತೆಗೆದು ಹಾಕಲಾಗಿಲ್ಲ. ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದಾರೆ.

ಸ್ತ್ರೀ ಶಕ್ತಿ ಸಂಘದಿಂದ ಬ್ಯಾಂಕ್ ಸಿಬ್ಬಂದಿ ಬೈಕಿಗೆ ಬೆಂಕಿ: ಇದು ಸುಳ್ಳು ಸುದ್ದಿ, ಪೊಲೀಸರ ಸ್ಪಷ್ಟನೆ
ಮುಳಬಾಗಿಲು ತಾಲ್ಲೂಕ್ ಬಿಸ್ನಹಳ್ಳಿ ಗ್ರಾಮದಲ್ಲಿ ಸಾಲ ವಸೂಲಿ ಮಾಡಲು ಹೋದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯ ಬೈಕಿಗೆ ಸ್ತ್ರಿ ಶಕ್ತಿ ಸಂಘದವರು ಬೆಂಕಿ ಹಚ್ಚಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಸುದ್ದಿ ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಕಲಿ ಡಿಲಿಮಿಟೇಶನ್ ಕರಡು: ಬಿಬಿಎಂಪಿ
ಕರಡನ್ನು ನೋಡಿದ ನಂತರ, ಅನೇಕ ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ, ಆದರೆ ಇದು ನಕಲಿ ಕರಡು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹಡಗಿನಲ್ಲಿ ಎನ್ ಸಿಬಿ ದಾಳಿ ನಕಲಿ; ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ: ಎನ್ ಸಿಪಿ
ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಹಡಗೊಂದರ ಮೇಲೆ ನಡೆದ ಎನ್ ಸಿಬಿ ದಾಳಿ ನಕಲಿ, ಅದರೊಳಗೆ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಬುಧವಾರ ಆರೋಪಿಸಿದೆ.

ವಿದೇಶದಲ್ಲಿ ಉದ್ಯೋಗದ ಆಮಿಷ: ನಕಲಿ ಉದ್ಯೋಗ ಸಂಸ್ಥೆಗಳಿಂದ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ದುರುಪಯೋಗ
ಎಲ್ಲರಿಗೂ ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಸಂಪಾದಿಸುವ ಆಸೆ. ಅದನ್ನು ಬಳಸಿಕೊಳ್ಳುವ ನಕಲಿ ಉದ್ಯೋಗ ಸಂಸ್ಥೆಯ ವಂಚಕರು, ಆಫೀಸ್ ಬಾಯ್ ಆಗಿದ್ದವರಿಗೆ ಮ್ಯಾನೇಜರ್ ಹುದ್ದೆ ಕೊಡಿಸುವ ಆಮಿಷ ಒಡ್ಡುತ್ತಾರೆ. ಅದಕ್ಕೆ ಕೊರೊನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಅಮಾಯಕರು ಬಲಿಯಾಗುತ್ತಿದ್ದಾರೆ.

'ಕೊರೋನಾವನ್ನು ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು, ಸುಳ್ಳು-ಮೋಸಗಳ ಫೇಕುಗಿರಿಯಿಂದ ಅಲ್ಲ'
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಕೊರೋನಾ ಪರೀಕ್ಷೆ ಕಡಿಮೆ ಮಾಡುವ ಮೂಲಕ ಸರ್ಕಾರ ಜನರಲ್ಲಿ ಸುಳ್ಳು ಭರವಸೆ ಬಿತ್ತುತ್ತಿದೆ ಎಂದು ಆರೋಪಿಸಿದ್ದಾರೆ.

ಚೀನಾ ದೇಶದ ನಕಲಿ ಚಿನ್ನದ ಕಥೆ!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರು: ನಕಲಿ ಮಾಸ್ಕ್ ತಯಾರಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ; 12,300 ಮಾಸ್ಕ್ ವಶಕ್ಕೆ, ಓರ್ವ ಬಂಧನ
ಕೊರೋನಾ ವೈರಸ್ ಭೀತಿಯ ಸಂದರ್ಭದಲ್ಲೇ ಸಿಲಿಕಾನ್ ಸಿಟಿಯಲ್ಲಿ ನಕಲಿ ಮಾಸ್ಕ್‌ಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ನನ್ನು ಬಂಧಿಸಿದ್ದಾರೆ.

