ರಾಜ್ಯ

ಕೊಪ್ಪಳ: ದೇವಸ್ಥಾನ ಪ್ರವೇಶಿಸಿದ್ದ 2 ವರ್ಷದ ದಲಿತ ಬಾಲಕನ ಪೋಷಕರಿಗೆ ದಂಡ ವಿಧಿಸಿದ್ದ ಐವರ ಬಂಧನ!

ಮಿಯಾಪುರ ಗ್ರಾಮದ ಹನುಮಾನ್ ದೇವಸ್ಥಾನವನ್ನು ಎರಡು ವರ್ಷದ ಮಗ ಪ್ರವೇಶಿಸಿದ ನಂತರ ದಲಿತ ಕುಟುಂಬಕ್ಕೆ 25,000 ರೂಪಾಯಿ ದಂಡ ವಿಧಿಸಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಪ್ಪಳ: ದೇವಸ್ಥಾನ ಪ್ರವೇಶಿಸಿದ್ದ 2 ವರ್ಷದ ದಲಿತ ಬಾಲಕನ ಪೋಷಕರಿಗೆ ದಂಡ ವಿಧಿಸಿದ್ದ ಐವರ ಬಂಧನ!
ದೇವಸ್ತಾನ
Published On :

ಕೊಪ್ಪಳ: ಮಿಯಾಪುರ ಗ್ರಾಮದ ಹನುಮಾನ್ ದೇವಸ್ಥಾನವನ್ನು ಎರಡು ವರ್ಷದ ಮಗ ಪ್ರವೇಶಿಸಿದ ನಂತರ ದಲಿತ ಕುಟುಂಬಕ್ಕೆ 25,000 ರೂಪಾಯಿ ದಂಡ ವಿಧಿಸಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಐವರನ್ನು ಬಂಧಿಸಿದ್ದೇವೆ. ಸೆಪ್ಟೆಂಬರ್ 4ರಂದು ಪ್ರಕರಣ ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದ್ದು ದಲಿತ ಕುಟುಂಬವು ದೂರು ನೀಡಲು ಹಿಂಜರಿಯುತ್ತಿತ್ತು ಎಂದು ಕೊಪ್ಪಳ ಎಸ್ಪಿ ಟಿ ಶ್ರೀಧರ ತಿಳಿಸಿದರು.

ಚೆನ್ನದಾಸರ ಸಮುದಾಯಕ್ಕೆ ಸೇರಿದ ಚಂದ್ರಶೇಖರ್ ತನ್ನ ಎರಡು ವರ್ಷದ ಪುತ್ರನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆ. 4ರಂದು ಹನುಮಂತನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದರು. 'ಚಂದ್ರಶೇಖರ್ ಮತ್ತು ಅವರ ಕುಟುಂಬ ಸದಸ್ಯರು ದೇವಸ್ತಾನದ ಹೊರಗೆ ನಿಂತಿದ್ದರು. ಆದರೆ ಬಾಲಕ ದೇವಾಲಯದ ಒಳಗೆ ಓಡಿಹೋಗಿದ್ದನು. ಇದು ದೇವಾಲಯದ ಪೂಜಾರಿಗೆ ಕಿರಿಕಿರಿಯನ್ನುಂಟು ಮಾಡಿತು ಎಂದು ಶ್ರೀಧರ್ ಹೇಳಿದರು.

ಮೇಲ್ಜಾತಿಯ ಕೆಲವು ಇತರರು ಪೂಜಾರಿಯ ಪರವಾಗಿ ನಿಂತರು. ಅಲ್ಲದೆ ಸೆಪ್ಟೆಂಬರ್ 11ರಂದು ಸಭೆ ಸೇರಿಸಿ ಅಲ್ಲಿ ದೇವಾಲಯದ 'ಶುದ್ಧೀಕರಣ'ಗಾಗಿ 25,000 ರೂಪಾಯಿ ದಂಡ ತೆರುವಂತೆ ಹೇಳಿದ್ದರು. ಆದರೆ ಇದನ್ನು ಮೇಲ್ಜಾತಿಯ ಇತರ ಗ್ರಾಮಸ್ಥರು ಈ ಕ್ರಮವನ್ನು 'ಕಠಿಣ' ಎಂದು ವಿರೋಧಿಸಿದರು.

ಈ ಪ್ರಸಂಗವು ಗ್ರಾಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಇದು ಕುಷ್ಟಗಿ ಪೊಲೀಸರ ಗಮನಕ್ಕೆ ಬಂದಿತು. ಮೇಲ್ಜಾತಿಯ ವರ್ಗಗಳ ಹಿಂಬಡಿತಕ್ಕೆ ಹೆದರಿ ಕುಟುಂಬವು ಪೊಲೀಸರನ್ನು ಸಂಪರ್ಕಿಸಲು ಹೆದರುತ್ತಿತ್ತು. ಕೊಪ್ಪಳ ಜಿಲ್ಲೆಯ ಚೆನ್ನದಾಸರ ಮಹಾಸಭಾದ ಕೆಲವು ಸದಸ್ಯರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದು, ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ ದೂರಿನ ಆಧಾರದ ಮೇಲೆ, ಮಂಗಳವಾರ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಲ್ಲಿ, ಜಿಲ್ಲಾಡಳಿತವು ಜಾತೀಯತೆಯ ದುಷ್ಟತನ ಮತ್ತು ಸಮಾಜದ ಮೇಲೆ ಅದರ ಪ್ರಭಾವದ ವಿರುದ್ಧ ಹಳ್ಳಿಯ ಜನರನ್ನು ಜಾಗೃತಗೊಳಿಸಲು ಸಾರ್ವಜನಿಕ ಸಭೆಗಳ ಸರಣಿಯನ್ನು ನಡೆಸಿತು.

ಅಲ್ಲದೆ ಒಂದು ದೊಡ್ಡ ಪೂಜೆ ನಡೆಸಲಾಗಿದ್ದು ಅಲ್ಲಿ ಗ್ರಾಮದ ಎಲ್ಲ ಸಮುದಾಯಗಳು ಪೋಲಿಸರ ಸಮ್ಮುಖದಲ್ಲಿ ಚೆನ್ನದಾಸರು ಸೇರಿದಂತೆ ಭಾಗವಹಿಸಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.