ಫ್ಲಾಟ್ ಖರೀದಿಸುವ ಬಡವರಿಗೆ ಸಿಹಿ ಸುದ್ದಿ; ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ
ಫ್ಲಾಟ್ ಖರೀದಿಸುವ ಬಡವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ ಪಕ್ಷಾತೀತವಾಗಿ ಅಂಗೀಕಾರವಾಗಿದೆ.

ಬೆಂಗಳೂರು: ಫ್ಲಾಟ್ ಖರೀದಿಸುವ ಬಡವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ ಪಕ್ಷಾತೀತವಾಗಿ ಅಂಗೀಕಾರವಾಗಿದೆ.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ವಿಧೇಯಕ ಇದಾಗಿದ್ದು, 45 ಲಕ್ಷ ರೂ.ವರೆಗಿನ ಫ್ಲಾಟ್ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ನೀಡುವ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿತು. ಶಾಸಕ ರಚನೆ ಕಲಾಪದಲ್ಲಿ ವಿಧೇಯಕ ಮಂಡನೆ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಬಡ ಮಧ್ಯಮವರ್ಗದ ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ 35 ಲಕ್ಷದ ರೆಗಿನ ಮನೆ ಖರೀದಿಗೆ ಇದ್ದ ಶೇ.5 ರ ಸ್ಟಾಂಪ್ ಡ್ಯೂಟಿ ಶೇ. 3 ಕ್ಕೆ ಇಳಿಸಲಾಗಿದೆ ಈಗ ಅದನ್ನು 35 ಲಕ್ಷದಿಂದ 45 ಲಕ್ಷದ ರೆಗಿನ ಮನೆಗಳ ಖರೀದಿಗೂ ಶೇ. 5 ರ ಸ್ಟಾಂಪ್ ಡ್ಯೂಟಿಯನ್ನು ಶೇ. 3 ಕ್ಕೆ ಇಳಿಸುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ 45 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳಿಗೆ ಸ್ಟಾಂಪ್ ಸುಂಕ ಇಳಿಕೆ
ರಾಜ್ಯದ ಎಲ್ಲಾ ನಗರಕ್ಕೂ ಇದು ಅನ್ವಯವಾಗಲಿದೆ, ಮಾರ್ಗಸೂಚಿ ದರ ಅವೈಜ್ಞಾನಿಕ ಎನ್ನುವ ಮಾತು ಸದಸ್ಯರಿಂದ ಬಂದಿದೆ, ಕೆಲವು ಕಡೆ ಅವೈಜ್ಞಾನಿಕ ಮಾರ್ಗಸೂಚಿ ದರ ಇದೆ, ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿದರವೇ ಹೆಚ್ಚಿದೆ ಇಂತಹ ಸಂದರ್ಭಗಳಲ್ಲಿ ಕಳ್ಳದಾರಿ ಹೆಚ್ಚಾಗಲಿದೆ. ಅವೈಜ್ಞಾನಿಕ ಮಾರ್ಗಸೂಚಿ ದರ ಇರುವ ಕಡೆ ಸರಿಪಡಿಸುವ ಪ್ರಯತ್ನ ನಾವು ಮಾಡಲಿದ್ದೇವೆ. ಸದ್ಯ ಈ ಬಿಲ್ ಫ್ಲಾಟ್ ಖರೀದಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತರಲಾಗಿದೆ ಹಾಗಾಗಿ ಬಿಲ್ ಗೆ ಅನುಮೋದನೆ ಕೊಡಿ ಎಂದು ಮನವಿ ಮಾಡಿದರು.
ಬಿಲ್ ಅನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸ್ವಾಗತಿಸಿ ಕೆಲವು ಸಲಹೆ ನೀಡಿದರು. ನಂತರ ಧ್ವನಿಮತದ ಮೂಲಕ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


