ಬಿಬಿಎಂಪಿಯಿಂದ ಈ ವರ್ಷ ಶಾಲೆ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಇಲ್ಲ
ಬಿಬಿಎಂಪಿಯ ಶೈಕ್ಷಣಿಕ ವಿಭಾಗ ಈ ವರ್ಷ ಶಾಲಾ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಮಾಡದಿರಲು ನಿರ್ಧರಿಸಿದೆ.

ಬೆಂಗಳೂರು: ಬಿಬಿಎಂಪಿಯ ಶೈಕ್ಷಣಿಕ ವಿಭಾಗ ಈ ವರ್ಷ ಶಾಲಾ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಮಾಡದಿರಲು ನಿರ್ಧರಿಸಿದೆ.
ಕಳೆದ ವರ್ಷ ಸ್ವೆಟರ್ ಗಳನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಸ್ವೆಟರ್ ಗಳನ್ನು ಪೂರೈಸುವಂತೆ ಶೈಕ್ಷಣಿಕ ಸಂಸ್ಥೆಗಳ ಮ್ಯಾನೇಜ್ಮೆಂಟ್ ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.
ಬಿಬಿಎಂಪಿಯಲ್ಲಿ ಆರ್ಥಿಕ ಅಕ್ರಮಗಳ ಆರೋಪ, ಬಿಬಿಎಂಪಿ ಸಿಬ್ಬಂದಿಗಳು, ಮಧ್ಯವರ್ತಿಗಳು, ಗುತ್ತಿಗೆದಾರರು ಸ್ವೆಟರ್ ಪೂರೈಕೆ ವಿಷಯದಲ್ಲಿ ವಂಚನೆ ಎಸಗಿರುವ ಆರೋಪ ಕೇಳಿಬಂದಿರುವ ನಡುವೆಯೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ.
ಈ ವರ್ಷದ 9 ನೇ ತರಗತಿಯಿಂದ ಪದವಿವರೆಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಬಿಬಿಎಂಪಿ ಅನುಮತಿಯನ್ನು ಕೇಳಿದೆ.
ಮಾರ್ಚ್ 2020 ರಲ್ಲಿ ಕೌನ್ಸಿಲ್ ನಲ್ಲಿ ತೆಗೆದುಕೊಂಡಿದ್ದ ನಿರ್ಧಾರದ ಆಧಾರದಲ್ಲಿ ಬಿಬಿಎಂಪಿ 1-12 ನೇ ತರಗತಿ ವರೆಗಿನ 14,000 ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಬೇಕಿತ್ತು. ಆದರೆ 2020 ರ ಏಪ್ರಿಲ್ ನಲ್ಲಿ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಸ್ವೆಟರ್ ಗಳ ವಿತರಣೆ ಮಾಡಲಾಗಿರಲಿಲ್ಲ. ಆ ನಂತರ 1-9 ನೇ ತರಗತಿ ವಿದ್ಯಾರ್ಥಿಗಳಿಗೆ ರೇಷನ್ ಕಿಟ್ ಗಳೊಂದಿಗೆ ಸ್ವೆಟರ್ ಗಳನ್ನು ವಿತರಣೆ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು. 9-12 ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 2020 ರಲ್ಲಿ ಶಾಲೆಗಳು ಪ್ರಾರಂಭವಾದಾಗ ವಿತರಣೆ ಮಾಡಲಾಗಿತ್ತು. ಇದಕ್ಕಾಗಿ ಬಿಬಿಎಂಪಿ ಹ್ಯಾಂಡ್ ಲೂಮ್ ಇಲಾಖೆಗೆ ಸ್ವೆಟರ್ ಗಳಿಗಾಗಿ ಗುತ್ತಿಗೆ ನೀಡಿತ್ತು.
ಕಳೆದ ವರ್ಷ ಶೇ.50-60 ರಷ್ಟು ಸ್ವೆಟರ್ ಗಳನ್ನು ನೀಡಿದ್ದೇವೆ, ಯಾರಿಗೆ ಸಿಕ್ಕಿಲ್ಲ ಅವರು ಈಗ ಬಂದು ಪಡೆದುಕೊಳ್ಳಬಹುದಾಗಿದೆ. ಈ ವರ್ಷ ಹೊಸ ಸ್ವೆಟರ್ ಗಳನ್ನು ನೀಡಲಾಗುವುದಿಲ್ಲ ಎಂದು ಈ ವರ್ಷ ಸಂಪೂರ್ಣ ಸಮವಸ್ತ್ರ ನೀಡಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


