ನೇಮಕಾತಿ 2021: ಬಿಬಿಎಂಪಿಯಲ್ಲಿ 420 ಹುದ್ದೆಗಳು ಖಾಲಿ, ಆಸಕ್ತರು ಅರ್ಜಿ ಸಲ್ಲಿಸಬಹುದು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ 420 ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ 420 ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಹೆಸರು:
ಪುರುಷ ಆರೋಗ್ಯ ಕಾರ್ಯಕರ್ತರು, ಫಿಜಿಷಿಯನ್, ರೇಡಿಯೋಲಾಜಿಸ್ಟ್,
ಒಟಿ ಟೆಕ್ನಿಷಿಯನ್, ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್,
ANM, ಲಸಿಕಾ ಮೇಲ್ವಿಚಾರಕರು, ಸೋಷಿಯಲಿಸ್ಟ್, ಮೆಡಿಕಲ್ ಆಫೀಸರ್,
ಆಫ್ಥಲ್ಮಿಕ್ ಅಸಿಸ್ಟಂಟ್, ಆಫ್ಥಲ್ಮಿಕ್ ಸರ್ಜನ್, ಕಮ್ಯೂನಿಟಿ ನರ್ಸ್,
ಸೋಶಿಯಲ್ ವರ್ಕರ್
ಒಟ್ಟು ಹುದ್ದೆಗಳು: 420
ಉದ್ಯೋಗ ಸ್ಥಳ ಬೆಂಗಳೂರು
ವಿದ್ಯಾರ್ಹತೆ:
ಪುರುಷ ಆರೋಗ್ಯ ಕಾರ್ಯಕರ್ತರು ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಜೊತೆಗೆ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಅರ್ಹತೆ ಹೊಂದಿರಬೇಕು.
ಫಿಜಿಷಿಯನ್ ಹುದ್ದೆಗೆ ಡಿ.ಎನ್.ಬಿ/ ಎಂ.ಡಿ, ಅಥವಾ ಸಮಾನಾಂತರ ಪದವಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಹೊಂದಿರಬೇಕು.
ರೇಡಿಯೋಲಾಜಿಸ್ಟ್ ಹುದ್ದೆಗೆ ಎಂ.ಡಿ (ರೇಡಿಯೋಲಾಜಿ) ಅರ್ಹತೆ ಹೊಂದಿರಬೇಕು.
ಓ.ಟಿ. ಟೆಕ್ನಿಷಿಯನ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮ ಇನ್ ಓಟಿ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು.
ಸ್ಟಾಫ್ ನರ್ಸ್ ಹುದ್ದೆಗೆ ಬಿ.ಎಸ್ಸಿ/ಜಿ.ಎನ್.ಎಂ/ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ ಹೊಂದಿರಬೇಕು.
ಫಾರ್ಮಾಸಿಸ್ಟ್ ಹುದ್ದೆಗೆ ಬಿ.ಫಾರ್ಮಾ/ಡಿ.ಫಾರ್ಮಾ ಅರ್ಹತೆ ಹೊಂದಿರಬೇಕು.
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಾಲಜಿ ಅರ್ಹತೆ ಹೊಂದಿರಬೇಕು.
ANM ಹುದ್ದೆಗೆ ANM ವಿದ್ಯಾರ್ಹತೆಯನ್ನು ಹೊಂದಿರಬೇಕು.
ಲಸಿಕಾ ಕಾರ್ಯಕರ್ತರು ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಮ್.ಎಸ್.ಡಬ್ಲ್ಯೂ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು.
ಸ್ಪೆಷಲಿಸ್ಟ್ ಹುದ್ದೆಗೆ ಎಂ.ಡಿ ಪಿಡಿಯಾಟ್ರಿಷನ್/ಡಿ.ಎನ್.ಬಿ/ಡಿ.ಸಿ.ಹೆಚ್ ಅರ್ಹತೆ ಹೊಂದಿರಬೇಕು.
ಮೆಡಿಕಲ್ ಆಫೀಸರ್ ಹುದ್ದೆಗೆ ಎಂ.ಬಿ.ಬಿ.ಎಸ್ ಅರ್ಹತೆ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ
ಸಾಮಾನ್ಯ ವರ್ಗಕ್ಕೆ ಗರಿಷ್ಠ 35 ವರ್ಷ
ಪರಿಶಿಷ್ಟಜಾತಿ, ಪರಿಶಿಷ್ಠ ಪಂಗಡ. ಪ್ರವರ್ಗ 1 ಗರಿಷ್ಠ 40 ವರ್ಷ
2ಎ, 2ಬಿ, 3ಎ, 3ಬಿ ಗರಿಷ್ಠ 38 ವರ್ಷ
ವೇತನ: ಮಾಸಿಕ 11.500 ರೂ ನಿಂದ 1, 10,000
ಆಯ್ಕೆ ವಿಧಾನ
ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ದಿನಾಂಕ

ಸಂದರ್ಶನ ಸ್ಥಳ
ನೌಕರರ ಭವನ, ಬಿಬಿಎಂಪಿ ಪ್ರಧಾನ ಕಚೇರಿ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ
080-22110445

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


