ಹಾಸನಾಂಬೆ ದೇವಿ ದರ್ಶನಕ್ಕೆ 8 ದಿನ ಮಾತ್ರ ಅವಕಾಶ
ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಒಟ್ಟು ಎಂಟು ದಿನ ಸಾರ್ವಜನಿಕರಿಗೆ ಪ್ರವೇಶ ಲಭ್ಯವಾಗಿದೆ.

ಹಾಸನ: ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಒಟ್ಟು ಎಂಟು ದಿನ ಸಾರ್ವಜನಿಕರಿಗೆ ಪ್ರವೇಶ ಲಭ್ಯವಾಗಿದೆ.
ದೇವಾಲಯ 10 ದಿನ ತೆರೆಯಲಿದ್ದರೂ ಭಕ್ತರಿಗೆ ಮಾತ್ರ ಕೇವಲ 8 ದಿನಗಳಿಗೆ ಮಾತ್ರ ದರ್ಶನ ಅವಕಾಶವಿದೆ.ಹಾಸನಾಂಬೆ ದರ್ಶನಕ್ಕೆ ಬೇರೆ ಬೇರೆ, ರಾಜ್ಯಗಳಿಂದಲೂ ಜನತೆ ಬರುತ್ತಿರುತ್ತಿದ್ದಾರೆ. ಕೋವಿಡ್ ಕಾರಣದಿಂದ ಕಳೆದ ಬಾರಿ ದರ್ಶನವನ್ನುಕೇವಲ ಆನ್‌ಲೈನ್ ಗೆ ಸೀಮಿತಗೊಳಿಸಲಾಗಿತ್ತು.
ಆದರೆ ಈ ಬಾರಿ ಭಕ್ತರ ಮನವಿ ಮೇರೆಗೆ ಜಿಲ್ಲಾಡಳಿತ ಈ ಬಾರಿ ನೇರವಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು.ಎಂದೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ 28ರಿಂದ ನ.6ರವರೆಗೆ ಜರುಗಲಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


