2 ವರ್ಷಗಳ ಬಳಿಕ ಮತ್ತೆ ಹಂಪಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ: ದಕ್ಷಿಣ, ಬಾಲಿವುಡ್ ಸಿನಿ ತಂಡಗಳ ಸಾಲು!
ಕೋವಿಡ್-19 ಸಾಂಕ್ರಾಮಿಕದ ನಂತರ 2 ವರ್ಷಗಳ ಬಳಿಕ ಸಿನಿಮಾ ಚಿತ್ರೀಕರಣ ಪುನಾರಂಭಕ್ಕೆ ಹಂಪಿ ಸಜ್ಜುಗೊಂಡಿದೆ.

ಹಂಪಿ: ಕೋವಿಡ್-19 ಸಾಂಕ್ರಾಮಿಕದ ನಂತರ 2 ವರ್ಷಗಳ ಬಳಿಕ ಸಿನಿಮಾ ಚಿತ್ರೀಕರಣ ಪುನಾರಂಭಕ್ಕೆ ಹಂಪಿ ಸಜ್ಜುಗೊಂಡಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾರಂಪರಿಕ ತಾಣವಾಗಿರುವ ಹಂಪಿ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ನೆಚ್ಚಿನ ಚಿತ್ರೀಕರಣದ ಪ್ರದೇಶವಾಗಿದೆ.
ಹಂಪಿಯಲ್ಲಿ ಚಿತ್ರೀಕರಣ ನಡೆಸಲು 35 ಕ್ಕೂ ಹೆಚ್ಚು ಸಿನಿಮಾ ಯುನಿಟ್ ಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.
ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಕೋವಿಡ್-19 ಲಾಕ್ ಡೌನ್ ನಿಂದಾಗಿ ಹಂಪಿಯಲ್ಲಿ ಚಿತ್ರೀಕರಣ ನಡೆಸುವುದಕ್ಕಾಗಿ ಅನುಮತಿಯನ್ನು ಸ್ಥಗಿತಗೊಳಿಸಲಾಗಿತ್ತು. ಹಂಪಿಯ ನೈಸರ್ಗಿಕ ಸೌಂದರ್ಯ ಹಾಗೂ ವಾಸ್ತುಶಿಲ್ಪದ ಅದ್ಭುತಗಳಿಗಾಗಿ ಚಿತ್ರೀಕರಣಕ್ಕೆ ಆದ್ಯತೆ, ಆಕರ್ಷಣೆಯ ಪ್ರದೇಶವಾಗಿದೆ. ಹೆಲಿ ಟೂರಿಸಂ ಶೀಘ್ರವೇ ಪ್ರಾರಂಭವಾಗುವುದರಿಂದ ಸಿನಿಮಾ ಕ್ಷೇತ್ರವನ್ನು ಹಂಪಿ ಕೈಬೀಸಿ ಕರೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಹೊರತಾಗಿ ಮುಂಬೈ ಫಿಲಮ್ ಇಂಡಸ್ಟ್ರಿಯಿಂದ ಎರಡು ಅನುಮತಿ ಕೇಳಿ ಅರ್ಜಿ ಸಲ್ಲಿಸಲಾಗಿದೆ. ಸಿನಿಮಾ ಚಿತ್ರೀಕರಣ ಮಾಡುವವರು ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ. ಯಾವುದೇ ಹಾನಿ ಮಾಡಬಾರದೆಂಬ ನಿಯಮ ವಿಧಿಸಲಾಗಿದೆ. ಚಿತ್ರೀಕರಣದ ಪ್ರದೇಶಗಳಿಗೆ ಅನುಗುಣವಾಗಿ ಡೆಪಾಸಿಟ್ ಹಣದ ಜೊತೆಗೆ ದಿನವೊಂದಕ್ಕೆ ಚಿತ್ರೀಕರಣ ನಡೆಸಲು 1 ಲಕ್ಷ ರೂಪಾಯಿಗಳ ಶುಲ್ಕ ಪಡೆಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


