ಕೃಷಿ ಭೂಮಿಯಲ್ಲಿ 67ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದೇವೇಗೌಡ ದಂಪತಿ! ವಿಡಿಯೋ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಚೆನ್ನಮ್ಮ ಅವರ ದಾಂಪತ್ಯ ಜೀವನಕ್ಕೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೃಷಿಭೂಮಿಯಲ್ಲಿ ತೆಂಗಿನ ಸಸಿನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಚೆನ್ನಮ್ಮ ಅವರ ದಾಂಪತ್ಯ ಜೀವನಕ್ಕೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೃಷಿಭೂಮಿಯಲ್ಲಿ ತೆಂಗಿನ ಸಸಿನೆಟ್ಟು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ಹಸಿರಿನಿಂದ ಕಂಗೊಳಿಸುತ್ತಾ, ಸಂಭ್ರಮಿಸುತ್ತಿರುವ ತೋಟವನ್ನು ಕಂಡು 'ರೈತನ ಮಗ' ದೇವೇಗೌಡರು ಅಷ್ಟೇ ಸಂಭ್ರಮಪಟ್ಟರು ಎಂದಿದ್ದಾರೆ.
ದಂಪತಿ ಈ ಶುಭ ದಿನ ನನ್ನ ಪ್ರೀತಿಯ ತೋಟಕ್ಕೆ ಆಗಮಿಸಿ, ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟಿದ್ದು ಅವರ ಮಗನಾದ ನನ್ನನ್ನು ಭಾವಪರವಶನಾಗುವಂತೆ ಮಾಡಿತು. ಈ ಅಪರೂಪದ ಸನ್ನಿವೇಶ ಸೃಷ್ಟಿಸಿದ ದೇವರಿಗೆ ನನ್ನ ನಮನಗಳು. ದೇವೇಗೌಡ ದಂಪತಿಗೆ ಶುಭಾಶಯಗಳು ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


