ಕೋವಿಡ್-19: ಆಕ್ಸಿಜನ್ ಕೊರತೆ ಆತಂಕ, ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿರುವ ಜನತೆ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಆಕ್ಸಿಜನ್ ಕೊರತೆ ಎದುರಾಗಿದೆ. ಇಷ್ಟು ದಿನ ಹಾಲು, ತರಕಾರಿಗಳಿಗೆ ಕ್ಯೂ ನಿಲ್ಲುತ್ತಿದ್ದ ಜನರು ಇದೀಗ ಆಕ್ಸಿಜನ್ ಗಾಗಿ ಸರದಿ ಸಾಲಿನಲ್ಲಿ ನಿಂತು, ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಆಕ್ಸಿಜನ್ ಕೊರತೆ ಎದುರಾಗಿದೆ. ಇಷ್ಟು ದಿನ ಹಾಲು, ತರಕಾರಿಗಳಿಗೆ ಕ್ಯೂ ನಿಲ್ಲುತ್ತಿದ್ದ ಜನರು ಇದೀಗ ಆಕ್ಸಿಜನ್ ಗಾಗಿ ಸರದಿ ಸಾಲಿನಲ್ಲಿ ನಿಂತು, ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಆಕ್ಸಿಜನ್ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಜನರು ಮನೆಗಳಲ್ಲಿಯೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಸರ್ಕಾರದ ದಾಖಲೆಗಳ ಪ್ರಕಾರ, ಶುಕ್ರವಾರದವರೆಗೂ ಆಕ್ಸಿಜನ್ ಬೇಡಿಕೆ 1,240 ಮೆ.ಟನ್ ಇದೆ ಎಂದು ತಿಳಿದುಬಂದಿದೆ. ಇದರಲ್ಲಿ 900 ಮೆ.ಟನ್ ಪೂರೈಕೆ ಮಾಡಲಾಗುತ್ತಿದೆ. ಒಟ್ಟು ಬೇಡಿಕೆಯಲ್ಲಿ ಶೇ.30-40ರಷ್ಟು ಆಕ್ಸಿಜನ್ ಖಾಸಗಿ ಆಸ್ಪತ್ರೆಗಳು ಪಡೆಯುತ್ತಿದ್ದರೆ, ಶೇ.20- 25ರಷ್ಟನ್ನು ಜನರು ಮನೆಗಳಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಕೆಲವರು ವೈದ್ಯರ ಸಲಹೆ ಮೇರೆಗೆ ಮನೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಕೆಲ ಜನರು ಆಕ್ಸಿಜನ್ ಕೊರತೆ ಎದುರಾಗುವ ಭೀತಿಯಿಂದಾಗಿ ದಾಸ್ತಾನು ಮಾಡಿಕೊಲ್ಳುತ್ತಿದ್ದಾರೆ. ಕೆಲವರಿಗಂತೂ ಅದನ್ನು ಯಾವ ರೀತಿ ಬಳಕೆ ಮಾಡಬೇಕೆಂಬುದೇ ಗೊತ್ತಿಲ್ಲ. ಹೀಗಾಗಿ ಇದರಿಂದ ಮುಂದೆ ಎದುರಾಗುವ ಗಂಭೀರ ವೈದ್ಯಕೀಯ ಸಮಸ್ಯೆ ಕುರಿತು ಆತಂಕ ಶುರುವಾಗಿದೆ ಎಷ್ಟು ಮಂದಿ ತಮ್ಮ ತಮ್ಮ ಮನೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಹೊಂದಿದ್ದಾರೆಂಬ ಮಾಹಿತಿ ಕೂಡ ಸರ್ಕಾರದ ಬಳಿ ಇಲ್ಲ ಎಂದು ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆದೇಶ ಕೂಡ ಆಕ್ಸಿಜನ್ ಕೊರತೆಗೆ ಕಾರಣವಾಗಿದೆ. ಸರ್ಕಾರದ ಆದೇಶ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ತಮಿಳುನಾಡಿನ ಹೊಸೂರಿನವರು ಆಕ್ಸಿಜನ್ ಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರಿಗೆ ಬೆಂಗಳೂರು ಹತ್ತಿರವಿರುವುದರಿಂದ ಇಲ್ಲಿಂದಲೇ ಆಕ್ಸಿಜನ್ ಸಿಲಿಂಡರ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಇದೀಗ ಸರಬರಾಜುದಾರರು ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ. ಇದೇ ರೀತಿ ಬೆಳಗಾವಿಯಲ್ಲಿಯೂ ನಡೆಯುತ್ತಿದೆ. ಕೊಲ್ಹಾಪುರದಲ್ಲಿರುವವರು ಬೆಳಗಾವಿಗೆ ಬಂದು ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗುತ್ತಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಯು ಹಾಗೂ ಆಕ್ಸಿಜನ್ ಬೆಡ್ ಗಾಗಿ ಬೇಡಿಕೆಗಳು ಹೆಚ್ಚಾಗುವೆ. ಸಣ್ಣ ಸಣ್ಣ ಆಸ್ಪತ್ರೆಗಳೂ ಕೂಡ ಇದೀಗ ಸೋಂಕಿತರನ್ನು ದಾಖಲು ಮಾಡಿಕೊಳ್ಳುತ್ತಿವೆ. ಆದರೆ, ಆಕ್ಸಿಜನ್ ಸಾಮರ್ಥ್ಯವನ್ನು ಮಾತ್ರ ಘೋಷಣೆ ಮಾಡುತ್ತಿಲ್ಲ. ಈ ಆಸ್ಪತ್ರೆಗಳೂ ಕೂಡ ಆಕ್ಸಿಜನ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿವೆ ಎಂದು ಅಧಿಕಾರಿಗಳಿು ಹೇಳಿದ್ದಾರೆ.
ನಾನು ಪರವಾನಗಿ ಹೊಂದಿರುವ ನೋಂದಾಯಿತ ಆಕ್ಸಿಜನ್ ಪೂರೈಕೆದಾರನಾಗಿದ್ದೇನೆ. ಆದರೂ, ಉತ್ಪಾದನಾ ಘಟಕಗಳಿಂದ ಲಿಕ್ವಿಡ್ ಆಕ್ಸಿಜನ್ ಪಡೆಯಲು ಸಾಧ್ಯವಾಗುತ್ತಿಲ್ಲ. ವಾಹನ ಬೇಕೆಂದು ಉತ್ಪಾದನಾ ಘಟಕಗಳು ಕೇಳುತ್ತಿದ್ದು, ನನ್ನ ಬಳಿ ವಾಹನವಿಲ್ಲ. ಆದರೆ, ನೋಡಲ್ ಅಧಿಕಾರಿಗಳು ಆಕ್ಸಿಜನ್ ಪೂರೈಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾನೂ ಆಕ್ಸಿಜನ್ ಯಾವ ರೀತಿಯಲ್ಲಿ ಪೂರೈಸಲಿ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ.
ಕರ್ನಾಟಕ ಕೇರಳ ರಾಜ್ಯವನ್ನು ನೋಡಿ ಕಲಿಯಬೇಕಿದೆ. ಎರಡನೇ ಅಲೆಯ ಸೂಕ್ಷ್ಮತೆ ಅರಿತು ಕೂಡಲೇ ಎಲ್ಲಾ ಹಾಸಿಗೆಗಳನ್ನು ಆಕ್ಸಿಜನ್ ಬೆಡ್ ಗಳಾಗಿ ಪರಿವರ್ತಿಸಿತ್ತು. ಇದೀಗ ಅಲ್ಲಿ 93 ಆಕ್ಸಿಜನ್ ಟ್ಯಾಂಕರ್ ಗಳಿವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


