ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಕಲೆಹಾಕಿದ ಬಿಬಿಎಂಪಿ
ಬೆಂಗಳೂರಿನಲ್ಲಿ ವೈದ್ಯರೋರ್ವರಲ್ಲಿ ಡೆಲ್ಟಾ + ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಜೊತೆಗಿದ್ದವರನಗನು ಬಿಬಿಎಂಪಿ ಟ್ರೇಸಿಂಗ್ ಮಾಡಿದ್ದು, ಸಂಪರ್ಕ ಹೊಂದಿದ್ದವರನ್ನು ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ವೈದ್ಯರೋರ್ವರಲ್ಲಿ ಡೆಲ್ಟಾ + ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಜೊತೆಗಿದ್ದವರನಗನು ಬಿಬಿಎಂಪಿ ಟ್ರೇಸಿಂಗ್ ಮಾಡಿದ್ದು, ಸಂಪರ್ಕ ಹೊಂದಿದ್ದವರನ್ನು ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ.
ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಲ್ಲಿಯವರೆಗೆ ಎರಡು ಡೆಲ್ಟಾ + ಸೋಂಕು ಪತ್ತೆಯಾಗಿದೆ.ಮೈಸೂರಲ್ಲಿ ವೃದ್ಧರೊಬ್ಬರಲ್ಲಿ ಮೊದಲು ಈ ರೂಪಾಂತರಿ ವೈರಸ್ ಸೋಂಕು ಕಂಡುಬಂದಿತ್ತು.
ಈ ಬಗ್ಗೆ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿವಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ಡೆಲ್ಟಾ + ವೈರಸ್ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೇಸ್ ಡೆಲ್ಟಾ ಪ್ಲಸ್ ಎಂದು ಗುರುತಿಸಲಾಗಿದೆ. ಈ ಕೇಸ್ ಗಳ ಪರಿಶೀಲನೆ ಮಾಡಿದಾಗ ಹಿಂದೆಯೇ ರಾಜ್ಯ ಸರ್ಕಾರ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸ್ ಸಹ ಮಾಡಲಾಗಿದೆ. ಮ್ಯೂಟೆಂಟ್ ವೈರೆಸ್ ಎಂದು ಪ್ರತ್ಯೇಕಿಸಿ ಈ ಕೇಸ್ ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಡೆಲ್ಟಾ ಗಿಂತ ಸ್ವಲ್ಪ ಭಿನ್ನ ಎಂದು ಗುರುತಿಸಲಾಗಿತ್ತು. ಓರ್ವ ವ್ಯಕ್ತಿ ಗುಣಮುಖರಾಗಿದ್ದಾರೆ.ಇವರ ಸಂಪರ್ಕದಲ್ಲಿದ್ದಾಗ ಕುಟುಂಬಸ್ಥರು ಸಹ ಗುಣಮುಖರಾಗಿದ್ದಾರೆ. ಜಿನೋಮ್ ಸೀಕ್ವೆನ್ಸ್ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದರು. ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಗುರುತಿಸಲ್ಪಟ್ಟವರ ಸ್ಯಾಂಪಲ್ಸ್ ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗುತ್ತದೆ. ನಗರದಲಿ ಡೆಲ್ಟಾ + ಹರದಡಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


