ಕೋವಿಡ್ ಗೆ 1,700 ಸರ್ಕಾರಿ ಸಿಬ್ಬಂದಿಗಳು ಬಲಿ, ರಕ್ತಸಂಬಂಧಿಗಳಿಗೆ 30 ಲಕ್ಷ ರೂ. ಪರಿಹಾರ
ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಿಂದ ಕನಿಷ್ಠ 1,700 ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಗೆ ಬಲಿಯಾಗಿದ್ದಾರೆ.ಈ ಪೈಕಿ, 1,21 ಉದ್ಯೋಗಿಗಳು ಏಪ್ರಿಲ್ 2021 ರಿಂದ ಎರಡನೇ ಅಲೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಬೆಂಗಳೂರು: ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಿಂದ ಕನಿಷ್ಠ 1,700 ರಾಜ್ಯ ಸರ್ಕಾರಿ ನೌಕರರು ಕೋವಿಡ್-19 ಗೆ ಬಲಿಯಾಗಿದ್ದಾರೆ.ಈ ಪೈಕಿ, 1,21 ಉದ್ಯೋಗಿಗಳು ಏಪ್ರಿಲ್ 2021 ರಿಂದ ಎರಡನೇ ಅಲೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರ ಪ್ರಕಾರ, ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಸೇರಿದ ನೌಕರರು ಕೋವಿಡ್-19 ರಿಂದ ಹೆಚ್ಚು ಘಾಸಿಗೊಂಡಿದ್ದಾರೆ. ಸುಮಾರು 60 ರಷ್ಟು ಉದ್ಯೋಗಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ 72 ಇಲಾಖೆಗಳಿದ್ದು, ಸರ್ಕಾರವು 5.3 ಲಕ್ಷ ಜನರನ್ನು ನೇಮಿಸಿಕೊಂಡಿದ್ದರೆ, ಮಂಜೂರಾದ ಶಾಶ್ವತ ಹುದ್ದೆಗಳು 7.7 ಲಕ್ಷ. 1.5 ಲಕ್ಷ ಗುತ್ತಿಗೆ ನೌಕರರೂ ಇದ್ದಾರೆ ಎಂದು ಷಡಕ್ಷರಿ ಟಿಎನ್‌ಐಇಗೆ ತಿಳಿಸಿದರು. ಕೋವಿಡ್ -19 ನಿಂದ ಸಾವನ್ನಪ್ಪಿದ ಸರ್ಕಾರಿ ನೌಕರರ ರಕ್ತಸಂಬಂಧಿಗಳಿಗೆ ಮತ್ತು ಅವಲಂಬಿತರಿಗೆ ಉದ್ಯೋಗ ನೀಡಲು ಸರ್ಕಾರ 30 ಲಕ್ಷ ರೂ. ಪರಿಹಾರ ನಿಗದಿ ಮಾಡಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಆದರೆ, ಕರ್ನಾಟಕ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಬಿ ಗುರುಸ್ವಾಮಿ, 30 ಲಕ್ಷ ರೂ. ಅಲ್ಪ ಮೊತ್ತವಾಗಿದ್ದು, ಪರಿಹಾರವಾಗಿ 1 ಕೋಟಿ ರೂ. ಅಗತ್ಯವೆಂದಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಕೋವಿಡ್ -19 ಕಾರಣದಿಂದಾಗಿ ವಿಧಾನ ಸೌಧ, ವಿಕಾಸ ಸೌಧ ಮತ್ತು ಎಂಎಸ್ ಬಿಲ್ಡಿಂಗ್ ಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ತೆರಿಗೆಗಳ ಮೂಲಕ ಸಾಕಷ್ಟು ಹಣ ಸಿಗದ ಕಾರಣ ಹಣಕಾಸು ನಿರ್ವಹಣೆಗೆ ಸರ್ಕಾರ ಹೆಣಗಾಡುತ್ತಿದೆ ಎಂದು ಸಿಎಂಒ ಮೂಲಗಳು ತಿಳಿಸಿವೆ. "ನಾವು ಪರಿಹಾರವನ್ನು ವಿತರಿಸಲು ಪ್ರಯತ್ನಿಸುತ್ತಿದ್ದರೂ ವಿಳಂಬಗಳಿವೆ, ಅದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು" ಎಂದು ಅಧಿಕಾರಿಯೊಬ್ಬರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


