ಕೊಡಗು: 70 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರ ನೀಡಿದ ಅಮೆರಿಕಾ ವೈದ್ಯ ಡಾ. ವಿವೇಕ್ ಮೂರ್ತಿ
ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ಮಡಿಕೇರಿಗೆ 70 ಲಕ್ಷ ರು ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.

ಮಡಿಕೇರಿ: ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ಮಡಿಕೇರಿಗೆ 70 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.
ಭಾನುವಾರ ಹಿರಿಯ ವಕೀಲ ಎನ್.ಎಸ್ ಚಂದ್ರಮೌಳಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರಿಸಿದರು. 70 ಆಮ್ಲಜನಕ ಪರಿವರ್ತಕಗಳು, 70 ವೈದ್ಯಕೀಯ ಟ್ರಾನ್ಸ್‌ಫಾರ್ಮರ್‌ಗಳು, 5,000 ಫೇಸ್ ಮಾಸ್ಕ್, 1.95 ಲಕ್ಷ ಮೌಲ್ಯದ N95 ಮಾಸ್ಕ್, 50 ಆಮ್ಲಜನಕ ಪೈಪ್ ಮತ್ತು 25 ಆಕ್ಸಿಮೀಟರ್‌ಗಳು ಸೇರಿದಂತೆ ಅನೇಕ ಸುಧಾರಿತ ವೈದ್ಯಕೀಯ ಸರಬರಾಜುಗಳನ್ನು ಸ್ಕೋಪ್ ಫೌಂಡೇಶನ್ ದಾನ ಮಾಡಿದೆ.
ಡಾ. ವಿವೇಕ್ ಮಂಡ್ಯ ಜಿಲ್ಲೆಯ ಮೂಲದವರಾಗಿದ್ದಾರೆ. ಚಂದ್ರಮೌಳಿ ಅವರು ಡಾ. ವಿವೇಕ್ ಮೂರ್ತಿ ಅವರ ತಂದೆಯನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಇದರಿಂದ ಮಂಡ್ಯ ಮತ್ತು ಮಡಿಕೇರಿ ಜಿಲ್ಲೆಗಳಿಗೆ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


