ರಾಜ್ಯ

ಬೆಂಗಳೂರಿನ 28.3 ಲಕ್ಷ ಜನರು ಕೊರೋನಾ ಲಸಿಕೆ ಪಡೆದಿದ್ದಾರೆ: ಸಚಿವ ಸುಧಾಕರ್

ಅತೀ ಹೆಚ್ಚು ಲಸಿಕೆ ಪಡೆದ ದೊಡ್ಡ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, 28.3 ಲಕ್ಷ ಬೆಂಗಳೂರಿಗರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ.

ಬೆಂಗಳೂರಿನ 28.3 ಲಕ್ಷ ಜನರು ಕೊರೋನಾ ಲಸಿಕೆ ಪಡೆದಿದ್ದಾರೆ: ಸಚಿವ ಸುಧಾಕರ್
ಸಚಿವ ಸುಧಾಕರ್
Published On :

ಬೆಂಗಳೂರು: ಅತೀ ಹೆಚ್ಚು ಲಸಿಕೆ ಪಡೆದ ದೊಡ್ಡ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, 28.3 ಲಕ್ಷ ಬೆಂಗಳೂರಿಗರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಬೆಂಗಳೂರಿನ 99 ಲಕ್ಷ ಜನಸಂಖ್ಯೆಯಲ್ಲಿ 28.34 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದು, ಶೇ.28.6ರ ಸಾಧನೆಯಾಗಿದೆ. ಈ ಸಾಧನೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಬಿಬಿಎಂಪಿಯನ್ನು ಅಭಿನಂದಿಸುತ್ತೇನೆಂದು ಹೇಳಿದ್ದಾರೆ. 

ಲಸಿಕೆ ಪಡೆದ ಜನಸಂಖ್ಯೆಯಲ್ಲಿ ಬೆಂಗಳೂರಿಗರೇ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈ 27.09 ಲಕ್ಷ (ಶೇ.20.5), ಪುಣೆ 23 ಲಕ್ಷ (ಶೇ.24.1), ಚೆನ್ನೈ 15.27 ಲಕ್ಷ (ಶೇ.33.1), ಕೋಲ್ಕತಾ 14.50 ಲಕ್ಷ (ಶೇ.32.2), ಗುರ್ಗಾಂವ್ 6.82 ಲಕ್ಷ (ಶೇ.39.2), ದೆಹಲಿ 42 ಲಕ್ಷ (ಶೇ.22.8) ರಷ್ಟು ಜನಸಂಖ್ಯೆಗೆ ಲಸಿಕೆ ನೀಡಿದೆ. 

ರಾಜ್ಯದ ಕೋವಿಡ್ ಹೋರಾಟಕ್ಕೆ ಕೇಂದ್ರ ಸರ್ಕಾರ ಸತತ ನೆರವು ನೀಡುತ್ತಿದ್ದು, ಜೂನ್ ತಿಂಗಳಿನಲ್ಲಿ 58.71 ಲಕ್ಷ ಡೋಸ್ ಕೋವಿಡ್ ಲಸಿಕೆ ರಾಜ್ಯಕ್ಕೆ ಸಿಗಲಿದೆ. ಈ ಪೈಕಿ 45 ಲಕ್ಷ ಡೋಸ್ ಭಾರತ ಸರ್ಕಾರ ನೀಡಲಿದ್ದು, ಉಳಿದ 13.7 ಲಕ್ಷ ಡೋಸ್ ಅನ್ನು ರಾಜ್ಯ ಸರ್ಕಾರ ನೇರವಾಗಿ ಖರೀದಿಸಲಿದೆ ಎಂದು ತಿಳಿಸಿದ್ದಾರೆ. 

ಜೂನ್ ತಿಂಗಳಿನಲ್ಲಿ ಭಾರತ ಸರ್ಕಾರ ರಾಜ್ಯಕ್ಕೆ 37.60 ಲಕ್ಷ ಡೋಸ್ ಕೋವಿಶೀಲ್ಡ್, 7.40 ಲಕ್ಷ ಡೋಸ್ ಕೋವ್ಯಾಕ್ಸಿನ್ ನೀಡಲಿದೆ. ರಾಜ್ಯ ಸರ್ಕಾರವು 10.86 ಲಕ್ಷ ಕೋವಿಶೀಲ್ಡ್ ಮತ್ತು 2.84 ಲಕ್ಷ ಡೋಸ್ ಕೋವ್ಯಾಕ್ಸಿನ್ ನ್ನು ಕಂಪನಿಯಿಂದ ನೇರವಾಗಿ ಖರೀಸಲಿದೆ ಎಂದಿದ್ದಾರೆ. 

ಇದೇ ವೇಳೆ ರಾಜ್ಯದಲ್ಲಿ ಈ ವರೆಗೆ ಕೋವಿಡ್ ಪರೀಕ್ಷೆಗಳ ಸಂಖ್ಯೆ 3 ಕೋಟಿ ದಾಟಿಸುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಅವರು ಪ್ರಯೋಗಾಲಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ರಾಜ್ಯದಲ್ಲಿ ಐಸಿಎಂಆರ್'ನಿಂದ ಅನುಮೋದನೆ ಪಡೆದಿರುವ 196 ಪ್ರಯೋಗಾಲಯಗಳಿವೆ. ರಾಜ್ಯದ ಕೋವಿಡ್ ಪರೀಕ್ಷೆಗಳಲ್ಲಿ ಶೇ.82 ಆರ್'ಟಿಪಿಸಿಆರ್ ಪರೀಕ್ಷೆಗಳಾಗಿವೆ. ಈ ಮೈಲಿಗಲ್ಲು ಸ್ಥಾಪಿಸಿದ್ದಕ್ಕಾಗಿ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.