ಕೋವಿಡ್-19: ನೆರವಿನ ನಿಧಿ ಸಂಗ್ರಹಕ್ಕಾಗಿ 60 ಕಲಾವಿದರಿಂದ ರಾಜ್ಯಾದ್ಯಂತ 12 ಗಂಟೆಗಳ ಮನರಂಜನೆ ಸೆಷನ್
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೇನೋ ಕಡಿಮೆಯಾಗುತ್ತಿವೆ, ಆದರೆ ಕೋವಿಡ್-19 ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅದೆಷ್ಟೋ ಕುಟುಂಬಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೇನೋ ಕಡಿಮೆಯಾಗುತ್ತಿವೆ, ಆದರೆ ಕೋವಿಡ್-19 ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅದೆಷ್ಟೋ ಕುಟುಂಬಗಳಿಗೆ ಇನ್ನೂ ಸಾಧ್ಯವಾಗಿಲ್ಲ.
ಈ ಹಂತದಲ್ಲಿ ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ ಸಂಗ್ರಹಿಸುವುದಕ್ಕಾಗಿ 60 ಕಲಾವಿದರ ತಂಡ ರಾಜ್ಯಾದ್ಯಂತ ವರ್ಚ್ಯುಯಲ್ ಮೋಡ್ ನಲ್ಲಿ ಜೂ.05 ರಂದು 12 ಗಂಟೆಗಳ ಮನರಂಜನಾ ಸೆಷನ್ ಮ್ಯಾರಥಾನ್ ನ್ನು ಆಯೋಜಿಸಿದೆ.
ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಸಿನಿಮಾ ಪ್ರೊಡಕ್ಷನ್ ಸಂಸ್ಥೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ನ ಗಣೇಶ್ ಪಾಪಣ್ಣ, ಕಂಟೆಂಟ್ ಅಭಿವೃದ್ಧಿ ಸಂಸ್ಥೆ ಮಲ್ಟಿಬಾಕ್ಸ್ ಎಂಟರ್ಟೈನ್ಮೆಂಟ್ ನ ಗೀತ್ ಜೇಸನ್ ವಾಜ್ ಮತ್ತು ಚರಣ್ ರಮೇಶ್ ಜನಪ್ರಿಯ ಯೂಟ್ಯೂಬ್ ಚಾನಲ್ ತರಲೆಬಾಕ್ಸ್ ಜೊತೆಗೂಡಿ ಈ ಸೆಷನ್ ನ್ನು ಆಯೋಜಿಸಿದ್ದಾರೆ.
ಕರ್ನಾಟಕದ ಸ್ಪ್ಯಾನ್ ಪ್ರಕಾರಗಳ ಲೈವ್ (Live of Karnataka span genres) ಶೀರ್ಷಿಕೆಯಡಿ 12 ಗಂಟೆಗಳ ಕಾರ್ಯಕ್ರಮ ತರಲೆ ಬಾಕ್ಸ್ ನಲ್ಲಿ ಪ್ರಸಾರವಾಗಲಿದೆ.
ಕೋವಿಡ್-19 ನಿಂದ ಸಂಕಷ್ಟ ಎದುರಿಸುತ್ತಿರುವ ಸಿನಿಮಾ ರಂಗದ ದೈನಂದಿನ ವೇತನ ಪಡೆಯುವ ಕಾರ್ಮಿಕರಿಗೆ ಹಾಗೂ ಸಾಮಾನ್ಯ ಜಾನಪದರಿಗೆ ನೆರವು ನೀಡುವುದು ಈ ಕಾರ್ಯಕ್ರಮ ಆಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಇದಕ್ಕಾಗಿ ನಾವು ಟ್ರಸ್ಟ್ ಒಂದರ ಸಹಾಯ ಪಡೆಯುತ್ತಿದ್ದು, ಅಗತ್ಯವಿರುವವರಿಗೆ ನೆರವು ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಬಿಂಡಿಗನವಿಲೆ ಹೇಳಿದ್ದಾರೆ. ನಟ ಆರ್ಯನ್ ಸಂತೋಷ್ ಜನರಲ್ಲಿ ಸಕಾರಾತ್ಮಕತೆ ಮೂಡಿಸುವ, ಉತ್ತೇಜಿಸುವ ಕುರಿತು ಮಾತನಾಡಲಿದ್ದು, ಸ್ವಾರಸ್ಯಕರ ಲಘು ಹಾಸ್ಯದ ಸಂಗತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುವುದಕ್ಕಾಗಿ ಡಿಜಿಟಲ್ ಮಾಧ್ಯಮದ ಸದ್ಬಳಕೆ ಇದಾಗಿದೆ, ಲಾಕ್ ಡೌನ್ ನಿಂದ ಸಿನಿರಂಗ ಮುಚ್ಚಿದೆ, ತಂತ್ರಜ್ಞರು ಸಹಾಯಕ್ಕಾಗಿ ಎದುರುನೋಡುತ್ತಿದ್ದಾರೆ. ಈ ಪ್ರಯತ್ನದಿಂದ ಹಲವರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ಶ್ರೀನಿವಾಸ್ ಬಿಂಡಿಹನವಿಲೆ, ಸ್ಟ್ಯಾಂಡ್ ಅಪ್ ಕಾಮಿಕ್ ಪವನ್ ವೇಣುಗೋಪಾಲ್ ಮಾತನಾಡಿದ್ದು, ಪ್ರೇಕ್ಷಕರಿಗೆ 12 ಗಂಟೆಗಳ ಕಾಲ ಮನರಂಜನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ನಾನು ಲಾಕ್ ಡೌನ್ ಹಾಗೂ ಆ ಜೀವನ ಜೈಲಿಯಲ್ಲಿನ ಹಾಸ್ಯದ ಬಗ್ಗೆ ಮಾತನಾಡಲಿದ್ದೇನೆ, ಕೋವಿಡ್-19 ಪರಿಹಾರಾರ್ಥವಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ನಾನು ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ, 12 ಗಂಟೆಗಳ ಕಾರ್ಯಕ್ರಮದಲ್ಲಿ 15-30 ನಿಮಿಷಗಳ ಸೆಷನ್ ಇರಲಿದೆ. ಇದರಲ್ಲಿ ಶಮಂತ್ ಗೌಡ, ಅರವಿಂದ್ ಕೆ.ಪಿ, ಮಂಜು ಪಾವಗಡ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದವರು ಇರಲಿದ್ದಾರೆ.
ಕಲಾವಿದರಾದ ಅನುಪಮ ಗೌಡ, ನಿರ್ದೇಶಕ ಹಾಗೂ ರೇಡಿಯೋ ಜಾಕಿ ಮಯೂರ ರಾಘವೇಂದ್ರ, ಭುವನ್ ಪೊನ್ನಣ್ಣ, ಡಿಜಿಟಲ್ ಕಂಟೆಂಟ್ ವಿಭಾಗದಲ್ಲಿರುವ ಶ್ರುತಿ ಸಹ ಭಾಗವಹಿಸಲಿದ್ದಾರೆ. ರಘು ದೀಕ್ಷಿತ್, ವಾಸು ದೀಕ್ಷಿತ್ ಮುಂತಾದವರು ಸಂಗೀತದೊಂದಿಗೆ ಮನರಂಜನೆ ನೀಡಲಿದ್ದಾರೆ" ಎಂದು ಶ್ರೀನಿವಾಸ್ ಬಿಂಡಿಗನವಿಲೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


