ರಾಜ್ಯ

ಉಡುಪಿ: ದುಬೈನಿಂದ ಹಿಂತಿರುಗಿದ್ದ 35 ವರ್ಷದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

ಆಘಾತಕಾರಿ ಘಟನೆಯಲ್ಲಿ, ಬ್ರಹ್ಮಾವರದ ಉಪ್ಪಿನಕೋಟೆಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಉಡುಪಿ: ದುಬೈನಿಂದ ಹಿಂತಿರುಗಿದ್ದ 35 ವರ್ಷದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ
ಮೃತ ಮಹಿಳೆ ವಿಶಾಲಾ
Published On :

ಬ್ರಹ್ಮಾವರ: ಆಘಾತಕಾರಿ ಘಟನೆಯಲ್ಲಿ, ಬ್ರಹ್ಮಾವರದ ಉಪ್ಪಿನಕೋಟೆಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ, ಭಾನುವಾರ ಕೊಲೆ ನಡೆದಿದ್ದರೂ, ಸೋಮವಾರ ಈ ಬಗ್ಗೆ ಸುದ್ದಿ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ದುಬೈನಿಂದ ಭಾರತಕ್ಕೆ ಮರಳಿದ ಗಂಗೊಳ್ಳಿ ಮೂಲದ ವಿಶಾಲಾ ಗಾಣಿಗ (35) ಹೀಗೆ ಶವವಾಗಿ ಪತ್ತೆಯಾಗಿರುವ ಮಹಿಳೆ. 

ಮಹಿಳೆ ತನ್ನ ತಂದೆಯೊಡನೆ ಗಂಗೊಳ್ಳಿಗೆ ತೆರಳಬೇಕಾಗಿತ್ತು ಎಂದು ವರದಿ ಹೇಳಿದೆ. ಆದರೆ ಆಕೆ ಬ್ಯಾಂಕಿನಲ್ಲಿ ಕೆಲಸವಿರುವುದಾಗಿ ಹೇಳಿದ್ದರಿಂದ ತನ್ನ ಅಪಾರ್ಟ್ ಮೆಂಟ್ ಗೆ ಮರಳಿದ್ದಳು. ಇದನ್ನು ಅನುಸರಿಸಿ ವಿಶಾಲಾ ತನ್ನ ತಂದೆಗೆ ಗಂಗೊಳ್ಳಿಗೆ ತೆರಳಲು ಹೇಳಿದ್ದಾರೆ. ಅಲ್ಲದೆ ತಾನು ಗಂಗೊಳ್ಳಿಗೆ ನಂತರ ಬಂದು ಭೇಟಿ ಆಗುವುದಾಗಿ ಹೇಳಿದ್ದರು.

ಆದರೆ ಎಷ್ಟು ಸಮಯವಾದರೂ ವಿಶಾಲಾ ಬರದಾಗ ಆಕೆಯ ತಂದೆ ಅವಳು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ವೇಳೆ ವಿಶಾಲಾ ಮೃತಪಟ್ಟಿರುವುದು ಗೊತ್ತಾಗಿದೆ.

ವಿಶಾಲಾಳ ಕುತ್ತಿಗೆಗೆ ಆದ ಗಾಯಗಳ ಪ್ರಕಾರ, ಕೊಲೆಗಾರರು ಅವಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಸಾಧ್ಯತೆ ಇದೆ.

ಉಡುಪಿ ಎಸ್ಪಿ ಎನ್ ವಿಷ್ಣುವರ್ಧನ್, ಡಿವೈಎಸ್ಪಿ ಕುಮಾರಚಂದ್ರ ಮತ್ತು ಇಲಾಖೆಯ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.