ಅಡಿಕೆ ಬೆಳೆಗಾರರ "ಅಡಕೆ ಕೊನೆ" ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ಪರಿಹಾರ: ಗೃಹ ಸಚಿವ ಆರಗ ಜ್ಞಾನೇಂದ್ರ
ಅಡಿಕೆ ಬೆಳೆಗಾರರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತೀರ್ಥಹಳ್ಳಿ: ಅಡಿಕೆ ಬೆಳೆಗಾರರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕೃಷಿ ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ಆಯೋಜಿಸಲಾಗಿದ್ದ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕನ್ನು ಸಹನೀಯಗೊಳಿಸಲು, ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳು, ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರೈತರು ಇತ್ತೀಚಿನ ದಿನಗಳಲ್ಲಿ ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ, ಬಹಳವಾಗಿ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರೂ ಆಕಸ್ಮಿಕವಾಗಿ ಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇದಕ್ಕೆಲ್ಲಾ ವರದಾನ ವೆಂಬಂತೆ, ಅತ್ಯಂತ ಹಗುರವಾದ ಹಾಗೂ ಬಹಳವಾಗಿ ಉಪಯೋಗವಾಗುವ ಹಾಗೂ ನೆರವಾಗುವ ಕಾರ್ಬನ್ ಧೋಟಿ ಯ ಆವಿಷ್ಕಾರ ಆಗಿದೆ ಎಂದರು. ಇದಕ್ಕಾಗಿ ಶ್ರಮಿಸಿದ, ಯುವ ಸಂಶೋಧನಾಕಾರರಿಗೆ ಅಭಿನಂದನೆಗಳು.
ಸಾಮಾನ್ಯ ರೈತರೂ ಈ ವಿನೂತನ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ, ಕೃಷಿ ಹಾಗೂ ತೋಟಗಾರಿಕೆ ಇಲಾಖಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ, ಮಾಡಲಾಗುವುದು ಎಂದೂ ಸಚಿವರು ತಿಳಿಸಿದರು.
ಅಡಕೆಯಿಂದ ಹತ್ತು ಹಲವು ಇತರ ಉತ್ಪನ್ನಗಳು ಹೊರ ಬರುತ್ತಿವೆ, ಇದೊಂದು ಅತ್ಯಂತ ಸಂತೋಷದಾಯಕ ವಿಚಾರವಾಗಿದೆ, ಎಂದು ಆರಗ ಜ್ಞಾನೇಂದ್ರ ತಿಳಿಸಿದರು. ಕೂಳೂರು ರಾವ್, ಸಾಹಿತಿ, ಛಾಯಾ ಚಿತ್ರಗ್ರಾಹಕ ಶ್ರೀಪಡ್ರೆ, ಡಾ. ರವಿಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


