ಕ್ಲಿನಿಕ್ ಸೇವಾ ಲೋಪ ಸಾಬೀತು: ದೂರುದಾರರಿಗೆ 3 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕರ ವೇದಿಕೆ ನಿರ್ದೇಶನ
ದೂರುದಾರರು ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು. ಈ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು.

ಬೆಂಗಳೂರು: ಗ್ರಾಹಕರ ವೇದಿಕೆ ನಗರದ ಶ್ರವಣ ಕ್ಲಿನಿಕ್ ಒಂದಕ್ಕೆ 3 ಲಕ್ಷ ರೂ.ಗಳನ್ನು ದೂರುದಾರಿಗೆ ನೀಡುವಂತೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಕಾರಿನ ಉತ್ಪಾದನಾ ದೋಷ: ಬೆಂಗಳೂರಿನ ಉದ್ಯಮಿಗೆ ಪರಿಹಾರ ಹಣ ನೀಡುವಂತೆ ಫೋರ್ಡ್ ಇಂಡಿಯಾಗೆ ಗ್ರಾಹಕ ವೇದಿಕೆ ಆದೇಶ
ಸುದೀಪ್ ಹೇಮಾರೆಡ್ಡಿ ಎಂಬುವವರು ಕ್ಲಿನಿಕ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 2019ರಲ್ಲಿ ಸುದೀಪ್ ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ಅದರ ಮೊತ್ತ 2.5 ಲಕ್ಷ ರೂ. ಅದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು.
ಎರಡನೇ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು. ಅಲ್ಲದೆ 2.5 ಲಕ್ಷ ಹಣವನ್ನು ಮರಳಿಸಲೂ ನಿರಾಕರಿಸಿದರು. ಆಗ ಸುದೀಪ್ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ವಿಚಾರಣೆಯಲ್ಲಿ ಕ್ಲಿನಿಕ್ ತಪ್ಪು ಎಸಗಿರುವುದು ಸಾಬೀತಾಗಿತ್ತು. ಹೀಗಾಗಿ ಸಾಧನದ ಶುಲ್ಕ ಸೇರಿದಂತೆ 50,000 ಪರಿಹಾರ ಸೇರಿ ಒಟ್ಟು 3 ಲಕ್ಷ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ವೇದಿಕೆ ಕ್ಲಿನಿಕ್ಕಿಗೆ ನಿರ್ದೇಶನ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


