ರೂಪದರ್ಶಿಗೆ ಕಳಪೆ ಮಟ್ಟದ ಕೇಶ ವಿನ್ಯಾಸ: 2 ಕೋಟಿ ರೂ. ಪರಿಹಾರ ನೀಡಲು ಐಟಿಸಿ ಮೌರ್ಯ ಸಲೂನ್ ಗೆ ಆದೇಶ
ಐಟಿಸಿ ಮೌರ್ಯ ಸಲೂನ್ ನಿಂದ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕಳಪೆ ಮಟ್ಟದ ಕೇಶ ವಿನ್ಯಾಸದಿಂದ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ನವದೆಹಲಿ: ಐಟಿಸಿ ಮೌರ್ಯ ಸಲೂನ್ ನಿಂದ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕಳಪೆ ಮಟ್ಟದ ಕೇಶ ವಿನ್ಯಾಸದಿಂದ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಮಹಿಳೆಯರು ತಮ್ಮ ಕೂದಲ ಬಗ್ಗೆ ಜಾಗರೂಕರಾಗಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ತಮ್ಮ ಕೂದಲನ್ನು ಸುಸ್ಥಿತಿಯಲ್ಲಿಡಲು ಅವರು ತುಂಬಾ ಹಣವನ್ನು ವ್ಯಯ ಮಾಡುತ್ತಾರೆ. ಅಲ್ಲದೇ, ಕೂದಲಿನೊಂದಿಗೆ ಅವರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂದು ಆಯೋಗದ ಅಧ್ಯಕ್ಷ , ನ್ಯಾಯಮೂರ್ತಿ ಕೆ.ಆರ್. ಅಗರ್ ವಾಲ್ ಮತ್ತು ಸದಸ್ಯ ಎಸ್.ಎಂ. ಕಾಂತಿಕರ್ ಅವರಿದ್ದ ಪೀಠ ಹೇಳಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೇವೆಯಲ್ಲಿ ಕೊರತೆ ಆಗಿರುವುದರಿಂದ ಎಂಟು ವಾರಗಳಲ್ಲಿ ದೂರುದಾರೆ ಅಶ್ನಾರಾಯ್ ಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಐಟಿಸಿ ಮೌರ್ಯ ಸಲೂನ್ ಗೆ ಆಯೋಗ ನಿರ್ದೇಶಿಸಿದೆ.
ಘಟನೆಯಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾಗಿದ್ದು, ಸ್ವಾಭಿಮಾನಕ್ಕೆ ಧಕ್ಕೆ ತಗುಲಿದೆ. ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ ಎಂದು ಆಶ್ನಾ ರಾಯ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


