ರಾಜ್ಯ

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಮೆಶಿನ್ ಗೆ ಸಿಕ್ಕಿ 14 ವರ್ಷದ ಬಾಲಕನಿಗೆ ತೀವ್ರ ಗಾಯ, ಸಾವು

ಸೀರೆ ಕಂಪ್ರೆಸ್ಸರ್ ಯಂತ್ರವನ್ನು ಕುತೂಹಲದಿಂದ ಮುಟ್ಟಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ಸರಹದ್ದಿನ ಹೊಸಗುಡ್ಡನಹಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಮೆಶಿನ್ ಗೆ ಸಿಕ್ಕಿ 14 ವರ್ಷದ ಬಾಲಕನಿಗೆ ತೀವ್ರ ಗಾಯ, ಸಾವು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಸೀರೆ ಕಂಪ್ರೆಸ್ಸರ್ ಯಂತ್ರವನ್ನು ಕುತೂಹಲದಿಂದ ಮುಟ್ಟಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ಸರಹದ್ದಿನ ಹೊಸಗುಡ್ಡನಹಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಚಿನ್ ಎಂದು ಗುರುತಿಸಲಾಗಿದ್ದು ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸಚಿನ್ ನ ಸಂಬಂಧಿ ಮನೀಶ ಎಂಬಾಕೆ ಜೆಎಂ ಹ್ಯಾಂಡ್ ಲೂಮ್ ನಲ್ಲಿ ಕೆಲಸ ಮಾಡುತ್ತಿದ್ದು, ಮೊನ್ನೆ ಶನಿವಾರ ಅಪರಾಹ್ನ ಸಚಿನ್ ಆಕೆಗೆ ಊಟ ನೀಡಲೆಂದು ಹೋಗಿದ್ದ. ಆಕೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಸಚಿನ್ ಕುತೂಹಲದಿಂದ ಕಂಪ್ರೆಸ್ಸರ್ ಮೆಶಿನ್ ನ ರೋಲರ್ ನ್ನು ಮುಟ್ಟಿದ್ದಾನೆ.

ಆತನ ಕೈ ಮೆಶಿನ್ ನಲ್ಲಿ ಸಿಕ್ಕಿ ಹಾಕಿಕೊಂಡಿತು. ಮೆಶಿನ್ ನ ತೀವ್ರ ಒತ್ತಡಕ್ಕೆ ಅವನ ತಲೆಯು ಯಂತ್ರದ ಕಬ್ಬಿಣದ ಕವಚಕ್ಕೆ ಅಪ್ಪಳಿಸಿ ತೀವ್ರ ಪೆಟ್ಟಾಗಿತ್ತು. ಸಿಬ್ಬಂದಿ ತಕ್ಷಣ ಯಂತ್ರವನ್ನು ಸ್ವಿಚ್ ಆಫ್ ಮಾಡಿ, ಹುಡುಗನನ್ನು ಎಳೆದರು.

ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.