ರಾಜ್ಯದಲ್ಲಿ 7710 ಕೋವಿಡ್ ಪ್ರಕರಣ ವರದಿ; ಒಟ್ಟು ಸೋಂಕಿತರ ಸಂಖ್ಯೆ 5.48 ಲಕ್ಷಕ್ಕೇರಿಕೆ
ರಾಜ್ಯದಲ್ಲಿ ಇಂದು ಹೊಸದಾಗಿ 7710 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 6748 ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟಾರೇಯಾಗಿ ಗುಣಮುಖರಾದವರ ಸಂಖ್ಯೆ 4,44,658 ಆಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆಯಾದರೂ, ಆರ್ಭಟ ಮುಂದುವರಿದೇ ಇದೆ. ಕಳೆದ 24 ಗಂಟೆಗಳಲ್ಲಿ 7710 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 65 ಮಂದಿ ಮೃತಪಟ್ಟಿದ್ದಾರೆ.
ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 5.48 ಲಕ್ಷಕ್ಕೇರಿಕೆಯಾಗಿದೆ. ಈ ನಡುವೆ, ಕಳೆದ 24 ಗಂಟೆಗಳಲ್ಲಿ 6748 ಮಂದಿ ಚೇತರಿಕೆ ಕಂಡಿದ್ದು, ಇಲ್ಲಿಯವರೆಗೆ 4.44 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 95549 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 827 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಲ್ಲಿಯವರೆಗೆ ಒಟ್ಟು 8350 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ 4192 ಪ್ರಕರಣಗಳು ವರದಿಯಾಗಿದ್ದು, 24 ಮಂದಿ ಮೃತಪಟ್ಟಿದ್ದಾರೆ.ಇದು ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬಾಗಲಕೋಟೆಯಲ್ಲಿ 60, ಬಳ್ಳಾರಿಯಲ್ಲಿ 21, ಬೀದರ್‌ನಲ್ಲಿ 71, ಚಾಮರಾಜನಗರದಲ್ಲಿ 17, ಚಿಕ್ಕಬಳ್ಳಾಪುರದಲ್ಲಿ 45, ಚಿತ್ರದುರ್ಗದಲ್ಲಿ 64, ಗದಗದಲ್ಲಿ 54, ಕಲಬುರಗಿಯಲ್ಲಿ 85, ಕೊಡಗಿನಲ್ಲಿ 2, ಕೋಲಾರದಲ್ಲಿ 31, ಕೊಪ್ಪಳದಲ್ಲಿ 56, ಮಂಡ್ಯದಲ್ಲಿ 56, ರಾಯಚೂರಿನಲ್ಲಿ 52, ರಾಮನಗರದಲ್ಲಿ 12, ತುಮಕೂರಿನಲ್ಲಿ 99, ಉಡುಪಿಯಲ್ಲಿ 74, ವಿಜಯಪುರದಲ್ಲಿ 79, ಯಾದಗಿರಿಯಲ್ಲಿ 42 ಪ್ರಕರಣಗಳು ವರದಿಯಾಗಿವೆ.
ಬೆಳಗಾವಿಯಲ್ಲಿ 191, ಬೆಂಗಳೂರು ಗ್ರಾಮಾಂತರದಲ್ಲಿ 189, ಚಿಕ್ಕಮಗಳೂರಿನಲ್ಲಿ 186, ದಕ್ಷಿಣ ಕನ್ನಡದಲ್ಲಿ 266, ದಾವಣಗೆರೆಯಲ್ಲಿ 131, ಧಾರವಾಡದಲ್ಲಿ 264, ಹಾಸನದಲ್ಲಿ 407, ಹಾವೇರಿಯಲ್ಲಿ 110, ಮೈಸೂರಿನಲ್ಲಿ 481, ಶಿವಮೊಗ್ಗದಲ್ಲಿ 234, ಶಿವಮೊಗ್ಗದಲ್ಲಿ 234, ಉತ್ತರಕನ್ನಡದಲ್ಲಿ 109 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


