ರಾಜ್ಯ

25 ವರ್ಷಗಳ ಬಳಿಕ ವೈಟ್ ಫೀಲ್ಡ್ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ

ಬರೊಬ್ಬರಿ 25 ವರ್ಷಗಳ ಬಳಿಕ ವೈಟ್ ಫೀಲ್ಡ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ದಶಕಗಳ ಬೇಡಿಕೆ ಇದೀಗ ಈಡೇರುತ್ತಿದೆ.

25 ವರ್ಷಗಳ ಬಳಿಕ ವೈಟ್ ಫೀಲ್ಡ್ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ
ರೈಲ್ವೇ ಕಾಮಗಾರಿ
Published On :

ಬೆಂಗಳೂರು: ಬರೊಬ್ಬರಿ 25 ವರ್ಷಗಳ ಬಳಿಕ ವೈಟ್ ಫೀಲ್ಡ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ದಶಕಗಳ ಬೇಡಿಕೆ ಇದೀಗ ಈಡೇರುತ್ತಿದೆ.

1995-96ರಲ್ಲೇ ಕೇಂದ್ರ ರೈಲ್ವೇ ಇಲಾಖೆ ಈ ಕಾಮಗಾರಿಗೆ ಅನುಮೋದನೆ ನೀಡಿತ್ತಾದರೂ ಬರೊಬ್ಬರಿ 25 ವರ್ಷಗಳ ಬಳಿಕ ಈ ಕಾಮಗಾರಿ ಚಾಲನೆ ಪಡೆದಿದೆ. ಸುಮಾರು 493 ಕೋಟಿ ರೂಗಳ ವೆಚ್ಚದಲ್ಲಿ ಈಗಿರುವ ಇರುವ ಎರಡು ಹಳಿಗಳೊಂದಿಗೆ ಮತ್ತೆ ಎರಡು ಹಳಿಗಳನ್ನು ಜೋಡಣೆ ಮಾಡಲಾಗುತ್ತಿದ್ದು, ಸುಮಾರು  25 ಕಿ.ಮೀ ವರೆಗೂ ಈ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಮೂಲಕ ಹೆಚ್ಚೆಚ್ಚು ರೈಲು ಓಡಿಸುವಂತೆ ಐಟಿ ವಲಯ ದಶಕಗಳಿಂದಲೂ ಕೇಳುತ್ತಿದ್ದ ಬೇಡಿಕೆ ಇದೀಗ ಈಡೇರುತ್ತಿದೆ.

ಈ ಹಳಿಗಳ ನಿರ್ಮಾಣದ ಹೂಡಿ, ಕೆ ಆರ್ ಪುರಂ, ಬೈಯಪ್ಪನಹಳ್ಳಿ, ಮತ್ತು ವೈಟ್‌ಫೀಲ್ಡ್ ನಲ್ಲಿ ರೈಲು ನಿಲುಗಡೆ ಸಾಧ್ಯವಾಗಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೈಋತ್. ರೈಲ್ವೇ ಮುಖ್ಯ ಎಂಜಿನಿಯರ್ ಆರ್ ಕೆ ಸಿಂಗ್ ಅವರು, ಈ ಹಳಿ ಬೈಯಪ್ಪನಹಳ್ಳಿ ಮತ್ತು ಕಂಟೋನ್ಮೆಂಟ್ ನಡುವೆ ಸಂಪರ್ಕ ಸಾಧಿಸಲಿದ್ದು,  ಇದು ಸುಮಾರು 6.5 ಕಿ,ಮೀ ದೂರದವೆರಗೂ ರೈಲು ಸಂಪರ್ಕ ಸಾಧಿಸುತ್ತದೆ. ಮಾರ್ಚ್ 2022ರೊಳಗೆ ಈ ಕಾಮಗಾರಿ ಪೂರ್ಣಗೊಳಿಸಲು ಡೆಡ್ ಲೈನ್ ಇದ್ದು, ಕಂಟೋನ್ಮೆಂಟ್ ನಿಂದ ವೈಟ್ ಫೀಲ್ಡ್ ವರೆಗಿನ ಸಂಪೂರ್ಣ ಕಾಮಗಾರಿ ಡಿಸೆಂಬರ್ 2022ರ ಒಳಗೆ ಪೂರ್ಣಗೊಳ್ಳಲಿದೆ. ಎರಡು ಕಾಮಗಾರಿಗಳೂ ಒಟ್ಟಿಗೆ  ನಡೆಯುತ್ತಿದ್ದು, ಈ ಹಂತದಲ್ಲಿ ಸುಮಾರು 50 ರೈಲ್ವೇ ಬ್ರಿಡ್ಜ್ ಗಳನ್ನು ನಿರ್ಮಿಸುವ ಯೋಜನೆ ಇದೆ. ತಡೆಗೋಡೆ ನಿರ್ಮಾಣದ ಗುತ್ತಿಗೆಯನ್ನು ಪಿಜೆ ಬೇಬಿ ಎಂಬ ಗುತ್ತಿಗೆದಾರರಿಗೆ ನೀಡಲಾಗಿದ್ದು, ಅರ್ಥಿಂಗ್ ಮತ್ತು ಇತರೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಪ್ಲಾಚ್ ಫಾರ್ಮ್ ಗಳ ನಿರ್ಮಾಣ ಮತ್ತು ನಿಲ್ದಾಣ  ಕಾಮಗಾರಿಗೆ ಇನ್ನಷ್ಟೇ ಟೆಂಡರ್ ಕರೆಯಬೇಕಿದೆ. ಕಂಟೋನ್ಮೆಂಟ್ ನಲ್ಲಿ ಪ್ರತ್ಯೇಕ ಸಬ್ ಅರ್ಬನ್ ಹಳಿ ಕಾಮಗಾರಿ ಕೂಡ ಇದೇ ಮಾರ್ಗದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.

ಸಾರಿಗೆ ತಜ್ಞ ಸಂಜೀವ್ ದ್ಯಾಮನ್ನವರ್ ಅವರು ಮಾತನಾಡಿ ಚತುಷ್ಕೋನ ಯೋಜನೆ ಮತ್ತು ಸ್ವಯಂಚಾಲಿತ ಸಿಗ್ನಲಿಂಗ್ ಯೋಜನೆ ರೈಲು ಪ್ರಯಾಣಿಕರಿಗೆ ವರದಾನವಾಗಲಿದೆ. ರೈಲುಗಳ ಸಮಯ ಸುಧಾರಿಸುತ್ತದೆ. ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಬಹುದು. ಬೈಯಪ್ಪನಹಳ್ಳಿ  ನಿಲ್ದಾಣದ ಬಳಿ ಕೇವಲ ಒಂದು ಲೆವೆಲ್ ಕ್ರಾಸಿಂಗ್ ಇದ್ದು ಅದನ್ನು ತೆಗೆದುಹಾಕಬೇಕಾಗಿದೆ. ಅದನ್ನು ಮಾಡಿದಾಗ, ಇದು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವೆ ಸರಾಗ ಸಂಚಾರವಾಗಿರುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.