ನಿವೃತ್ತಿ ಹೊಂದಿದ ಪೊಲೀಸರಿಗೂ ಐಡಿ ಕಾರ್ಡ್ ವಿತರಣೆ: ಡಿಜಿಪಿ ಪ್ರವೀಣ್ ಸೂದ್
ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಂತೆಯೇ ನಿವೃತ್ತಿ ಹೊಂದಿದ ಪೊಲೀಸರಿಗೂ ಗೂರುತಿನ ಚೀಟಿ ನೀಡಲು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.

ಬೆಂಗಳೂರು: ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಂತೆಯೇ ನಿವೃತ್ತಿ ಹೊಂದಿದ ಪೊಲೀಸರಿಗೂ ಗೂರುತಿನ ಚೀಟಿ ನೀಡಲು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸುತ್ತೋಲೆಯನ್ನು ಹೊರಡಿಸಿದ್ದು, ಸುತ್ತೋಲೆಯಲ್ಲಿ ಪೊಲೀಸ್ ಪೇದೆಯಿಂದ ಎಸ್'ಪಿ ವರೆಗೂ ನಿವೃತ್ತಿ ಹೊಂದಿದ ಎಲ್ಲಾ ಪೊಲೀಸರಿಗೂ ಗುರುತಿನ ಚೀಟಿ (ಐಡಿ ಕಾರ್ಡ್) ನೀಡುವಂತೆ ಸೂಚಿಸಲಾಗಿದೆ.
ಈ ಗುರುತಿನ ಚೀಟಿಯು ನಿವೃತ್ತಿ ಹೊಂದಿದ ಪೊಲೀಸರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಪ್ರಯಾಣದ ಸಂದರ್ಭಗಳಲ್ಲಿ, ಪೊಲೀಸ್ ಕ್ಯಾಂಟೀನ್'ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.
ಐಜಿಪಿ ಮತ್ತು ಎಸ್‌ಪಿ ಕಚೇರಿಗಳು, ಸಿಐಡಿ, ತರಬೇತಿ, ಆಂತರಿಕ ಭದ್ರತಾ ವಿಭಾಗ, ರಾಜ್ಯ ಗುಪ್ತಚರ, ರೈಲ್ವೆ ಮತ್ತು ಇತರ ವಿಶೇಷ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಎಲ್ಲರಿಗೂ ಗುರುತಿನ ಚೀಟಿ ನೀಡುವಂತೆ ಹಾಗೂ ಈ ಗುರುತಿನ ಚೀಟಿಯಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಯ ಹೆಸರು, ನಿವೃತ್ತಿಯ ಸಮಯದಲ್ಲಿ ಪಡೆದಿರುವ ಶ್ರೇಣಿ, ರಕ್ತದ ಗುಂಪು ಮತ್ತು ನಿವೃತ್ತಿಯ ದಿನಾಂಕ ಸೇರಿದಂದೆ ಮುಂತಾದ ವಿವರಗಳನ್ನು ನಮೂದಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


