ಶನಿ ಮಹರಾಜರು ತುಳಿದರೆ ಪಾತಾಳಕ್ಕೆ, ಕೈ ಹಿಡಿದು ಎತ್ತಿದರೆ ಆಕಾಶಕ್ಕೆ: ಡಿಕೆಶಿ
'ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಕೈ ಹಿಡಿದರೆ ಆಕಾಶದೆತ್ತ ರಕ್ಕೆ ಏರುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು: 'ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಕೈ ಹಿಡಿದರೆ ಆಕಾಶದೆತ್ತರಕ್ಕೆ ಏರುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಬೆಂಗಳೂರಿನ ಮತ್ತೀಕೆರೆಯಲ್ಲಿ ಪೂರ್ವಭಾವಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಇಂದು ಆರ್.ಆರ್ ನಗರದ ನೊಂದು, ಬೆಂದ ಜನ ಇಲ್ಲಿ ಸೇರಿದ್ದೀರಿ. ನನ್ನದು, ನನ್ನ ಸೋದರಿ ಕುಸುಮಾ ಇಬ್ಬರದ್ದೂ ಮೊದಲನೆ ಸಭೆ. ವಿಘ್ನ ನಿವಾರಕ ವಿನಾಯಕ ನಮಗಿಬ್ಬರಿಗೂ ವಿಜಯ ಕೊಡಲಿ ಅಂತ ಪ್ರಾರ್ಥಿಸುತ್ತೇನೆ ಎಂದರು.
ಪಕ್ಷದ ಕಾರ್ಯಕರ್ತರಿಗೆ ಆರ್.ಆರ್ ನಗರದಲ್ಲಿ ಸಾಕಷ್ಟು ತೊಂದರೆ ಆಗ್ತಿದೆ. ಇಂದಿಗೆ ಅವೆಲ್ಲವೂ ಮುಕ್ತಾಯವಾಗಲಿದೆ. ಇನ್ನು ಮುಂದೆ ಇಲ್ಲಿನ ಸಮಸ್ಯೆಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.
ಆರ್ ಆರ್ ನಗರದ ಉಪಚುನಾವಣೆಯಲ್ಲಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


