ಆರ್ ಆರ್ ನಗರ ಉಪ ಚುನಾವಣೆ

ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರ್ ಆರ್ ನಗರ ಉಪಚುನಾವಣೆ: ವಿವಾದ ಸೃಷ್ಟಿಸಿದ ಕೇಸರಿ ಮಾಸ್ಕ್!
ರಾಜ ರಾಜೇಶ್ವರಿ ನಗರ ಉಪ ಚುನಾವಣೆಗೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆ ಸಿಬ್ಬಂದಿ ಧರಿಸಿದ್ದ ಕೇಸರಿ ಬಣ್ಣದ ಮಾಸ್ಕ್‌ನ್ನು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.

ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಮತದಾನ ಮಾಡಿದೆ: ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್ ಪತ್ನಿ ಸಮೇತರಾಗಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಸೆಟ್ಟಾಪ್ ಬಾಕ್ಸ್ ಹಂಚಿಕೆ, ನಕಲಿ ವೋಟರ್ ಐಡಿ ಸೃಷ್ಟಿ, ಹಣ ಹಂಚಿಕೆ: ಮುನಿರತ್ನಂ ಅನರ್ಹಗೊಳಿಸಲು ಡಿಕೆಶಿ ಆಗ್ರಹ
ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ವೆಚ್ಚ ಮಿತಿ ದಾಟಿ ಸೆಟ್ ಅಪ್ ಬಾಕ್ಸ್ ವಿತರಣೆ, ನಕಲಿ ವೋಟರ್ ಐಡಿ ಸೃಷ್ಟಿ ಹಾಗೂ ಅಕ್ರಮ ಹಣ ಹಂಚಿಕೆ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಕಣದಿಂದ ತಕ್ಷಣ ಅನರ್ಹಗೊಳಿಸಬೇಕು...

ಆರ್ ಆರ್ ನಗರ ಉಪ ಚುನಾವಣೆ: ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ
ಮಂಗಳವಾರ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೋರೋನಾ ಸೋಂಕಿತರಿಗೂ ಸಹ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆರ್.ಆರ್ ನಗರ ಉಪಚುನಾವಣೆ: ಕ್ಷೇತ್ರದ ಹೊರಗಿನವರ ವಿರುದ್ಧ ಕ್ರಮ- ಕಮಲ್ ಪಂತ್
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಮುನಿರತ್ನರಿಂದ ಶಕುನಿ ಪಾತ್ರ: ಹಣ ಹಂಚಿಕೆ ವಿಡಿಯೋ ಬಿಡುಗಡೆ ಮಾಡಿದ ಸಂಸದ ಡಿಕೆ ಸುರೇಶ್
ಆರ್ ಆರ್ ನಗರದಲ್ಲಿ ಒಳ್ಳೆಯ ನಿರ್ಮಾಪಕರು ಸ್ಪರ್ಧಿಸಿದ್ದು, ಆಗಾಗ ಡೈರೆಕ್ಟಿಂಗ್ ಆ್ಯಕ್ಟಿಂಗ್ ನಡೆಯುತ್ತಿದೆ. ಹಿಂದೆ ದುಶ್ಯಾಸನನ ಪಾತ್ರ ಮಾಡುತ್ತಿದ್ದರು. ಈಗ ಶಕುನಿ ಪಾತ್ರ ಮಾಡುತ್ತಾ ಇದ್ದಾರೆ. ಚಿತ್ರಕಥೆಯೂ ಮುನಿರತ್ನದ್ದೆ. ಸ್ಪರ್ಧೆ ಚಿತ್ರವನ್ನು ಚೆನ್ನಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಆರ್ ಆರ್ ನಗರ ಉಪಚುನಾವಣೆ: ಪ್ರಚಾರದ ವೇಳೆ ಡಿಕೆ ಶಿವಕುಮಾರ್‌ರಿಂದ 'ಜೈ ಶ್ರೀರಾಮ್' ಘೋಷಣೆ!
ಆರ್ ಆರ್ ನಗರ ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಿಂದುತ್ವ ಜಪ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಹೊರಬರಬೇಕು: ಎಚ್ ಡಿ ಕುಮಾರಸ್ವಾಮಿ
ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಆದಷ್ಟುಬೇಗ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

