ಬೆಂಗಳೂರು: ನಿಶ್ಚಿತಾರ್ಥವಾಗಿ ಎರಡೇ ದಿನಕ್ಕೆ ಯುವತಿ ನೇಣಿಗೆ ಶರಣು!
ನಿಶ್ಚಿತಾರ್ಥವಾಗಿ ಎರಡೇ ದಿನಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರು ಉತ್ತರ ತಾಲೂಕು ಕದುರುಗೆರೆಯಲ್ಲಿ ನಡೆದಿದೆ.

ಬೆಂಗಳೂರು: ನಿಶ್ಚಿತಾರ್ಥವಾಗಿ ಎರಡೇ ದಿನಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರು ಉತ್ತರ ತಾಲೂಕು ಕದುರುಗೆರೆಯಲ್ಲಿ ನಡೆದಿದೆ.
ಇನ್ನೇನು ಕೆಲ ದಿನಗಳಲ್ಲಿ ವಿವಾಹವಾಗಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಬೇಕಿದ್ದ ಕದುರುಗೆರೆ ನಿವಾಸಿ ರೇಖಾ(23) ಆತ್ಮಹತ್ಯೆಗೆ ಶರಾಣಿರುವ ಯುವತಿ. ಈಕೆಗೆ ನೆಲಮಂಗಲದ ಒಂದು ಅನುಕೂಲಕರ ಕುಟುಂಬದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಆದರೆ ನಿಶ್ಚಿತಾರ್ಥ ನಡೆದು ಎರಡೇ ದಿನಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೇಖಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿದ್ದಾಳೆ. ಈಕೆಯ ಸಾವು ಹಲವಾರು ಪ್ರಶ್ನೆಗೆ, ಅನುಮಾನಕ್ಕೆ ಕಾರಣವಾಗಿದೆ.
ಮೃತ ರೇಖಾ ಎಂಬಿಎ ವ್ಯಾಸಂಗ ಮಾಡಿದ್ದಳು. ನಿಶ್ಚಿತಾರ್ಥದ ನಂತರವೂ ಭಾವೀ ಪತಿಯೊಂದಿಗೆ ಅನ್ಯೋನ್ಯತೆಯಿಂಡ ಫೋನ್ ನಲ್ಲಿ ಮಾತನಾಡಿದ್ದಳೆಂದು ಹೇಳಲಾಗಿದೆ. ಯುವತಿಯ ಪೋಷಕರು ಆಕೆಗೆ ಹೊಟ್ಟೆನೋವಿನ ಸಮಸ್ಯೆ ಇದ್ದದ್ದಾಗಿಯೂ ನೋವಿ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ನಿಜವಾದ ಕಾರಣ ಇನ್ನೂ ನಿಗೂಢವಾಗಿದೆ.

ಒಟ್ತಾರೆ ಘಟನೆಗೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


