ಕರ್ನಾಟಕವನ್ನು ಹೂಡಿಕೆಗೆ ಆಕರ್ಷಣೀಯ ರಾಜ್ಯವನ್ನಾಗಿ ಮಾಡಲು ಉತ್ಸುಕರಾಗಿದ್ದೇವೆ: ಸಿಎಂ ಯಡಿಯೂರಪ್ಪ
ಕರ್ನಾಟಕ ರಾಜ್ಯವನ್ನು ಹೂಡಿಕೆಯಲ್ಲಿ ಅದರಲ್ಲೂ ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಪ್ರಮುಖ ಆಕರ್ಷಣೀಯ ಹೂಡಿಕೆ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯವನ್ನು ಹೂಡಿಕೆಯಲ್ಲಿ ಅದರಲ್ಲೂ ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಪ್ರಮುಖ ಆಕರ್ಷಣೀಯ ಹೂಡಿಕೆ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು 'ಬೆಂಗಳೂರು ಟೆಕ್ ಸಮ್ಮಿಟ್ 2020' ಭಾಗವಹಿಸಿ ಮಾತನಾಡಿ, 2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ನಷ್ಟು ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಲಿಷ್ಠ ದೇಶವನ್ನಾಗಿ ಪರಿವರ್ತಿಸಲು ಪ್ರಧಾನಿ ಮೋದಿ ತೀವ್ರ ಉತ್ಸುಕವಾಗಿದ್ದಾರೆ. ಭಾರತ ಸರ್ಕಾರದ ಈ ದೃಷ್ಟಿಕೋನದಲ್ಲಿ ಸಾಗಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
2019ರಲ್ಲಿ 7 ಯುನಿಕಾರ್ನ್ಸ್ ಸ್ಟಾರ್ಟ್ ಅಪ್ ಗಳಲ್ಲಿ 4(1 ಬಿಲಿಯನ್ ಡಾಲರ್ ಮೊತ್ತ) ಬೆಂಗಳೂರಿನದ್ದಾಗಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


