ಕೋವಿಡ್-19 ಮೃತರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹಿಗಳು ಹೆಚ್ಚು: ಬೆಂಗಳೂರು ವೈದ್ಯಕೀಯ ಕಾಲೇಜು ಅಧ್ಯಯನ
ನಗರದ ಸರ್ಕಾರಿ ಆಸ್ಪತ್ರೆ ಲೇಡಿ ಕರ್ಜನ್ ಬೌರಿಂಗ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನವೆಂಬರ್ 8ರವರೆಗೂ ಒಟ್ಟಾರೇಯಾಗಿ 221 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಸೋಂಕಿತರು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಥವಾ ಮಧುಮೇಹಿಗಳು ಎಂಬುದು ತಿಳಿದುಬಂದಿದೆ.

ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆ ಲೇಡಿ ಕರ್ಜನ್ ಬೌರಿಂಗ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನವೆಂಬರ್ 8ರವರೆಗೂ ಒಟ್ಟಾರೇಯಾಗಿ 221 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಸೋಂಕಿತರು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಥವಾ ಮಧುಮೇಹಿಗಳು ಎಂಬುದು ತಿಳಿದುಬಂದಿದೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ದ್ವಿತೀಯಕ ಸೋಂಕಿಗೆ ಒಳಗಾಗುತ್ತಾರೆ. ಕೋವಿಡ್-19 ನಂತಹ ಸೋಂಕಿಗೆ ಒಂದು ಬಾರಿ ತುತ್ತಾದರೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ.ಅಲ್ಲದೇ ಅವರ ಶ್ವಾಸಕೋಶವು ವೈರಸ್ ನಿಂದ ಪ್ರಭಾವಿತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಗುಣಮುಖರಾಗಲು ಸಾಧ್ಯವಿರುವುದಿಲ್ಲ ಎಂದು ಬೌರಿಂಗ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮನೋಜ್ ಕುಮಾರ್ ಹೇಳಿದ್ದಾರೆ.
ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್-19 ಸೋಂಕಿಗೆ ಒಳಪಟ್ಟ ರೋಗಿಗಳಲ್ಲಿ ಹೃದಯ ಸ್ನಾಯುಗಳಲ್ಲಿ ಊರಿಯೂತವಾಗಿ ಸಾವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಟೈಪ್1 ಮತ್ತು ಟೈಪ್ 2 ಮಧುಮೇಹ ಎರಡೂ ದೀರ್ಘಕಾಲದ ಕಾಯಿಲೆಗಳಾಗಿವೆ, ಅದು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಉತ್ಪಾದಿಸುತ್ತದೆ. ಮಧುಮೇಹಿಗಳಲ್ಲಿ ದೇಹವು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ದೇಹದಲ್ಲಿ ಗ್ಲೂಕೋಸ್ ಹೆಚ್ಚಾಗುತ್ತದೆ ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಡಾ. ಮಹೇಶ್ ಹೇಳುತ್ತಾರೆ.
ಕೋವಿಡ್-19 ಸೋಂಕಿಗೆ ತುತ್ತಾದ ಬಹುತೇಕ ವೃದ್ಧರ ಸಾವಿಗೆ ಮಧುಮೇಹವೇ ಕಾರಣವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯೂ ಕೂಡಾ ಸಾವಿಗೆ ಕಾರಣವಾಗಿರಬಹುದು ಎಂದು ಡಾ. ಮಹೇಶ್ ತಿಳಿಸಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ 61 ರಿಂದ 70 ವರ್ಷದ 50 ರೋಗಿಗಳು, 51ರಿಂದ 60 ವರ್ಷದೊಳಗಿನ 47 ರೋಗಿಗಳು, 71ರಿಂದ 80 ವರ್ಷದೊಳಗಿನ 44 ರೋಗಿಗಳು, 41 ರಿಂದ 50 ವರ್ಷದೊಳಗಿನ 38 ರೋಗಿಗಳು, 31ರಿಂದ 40 ವರ್ಷದೊಳಗಿನ 17 ಸೋಂಕಿತರು, 21ರಿಂದ 30 ವರ್ಷದೊಳಗಿನ 8 ರೋಗಿಗಳು, 11ರಿಂದ 20 ವರ್ಷದೊಳಗಿನ ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೇ 221 ಸಾವಿನ ಪೈಕಿಯಲ್ಲಿ 145 ಪುರುಷರು ಮತ್ತು 76 ಮಹಿಳೆಯರು ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


