ರಾಜ್ಯ

ಅರಮನೆ ಮೈದಾನದಲ್ಲಿ ಶೆಲ್ಟರ್ ಕುಸಿತ: ಮಕ್ಕಳನ್ನು ರಕ್ಷಿಸಿದ ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್

ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಮಕ್ಕಳು ಆಶ್ರಯ ಪಡೆದಿದ್ದ ತಾತ್ಕಾಲಿಕ ಶೆಲ್ಟರ್ ಗಳು ಕುಸಿಯತೊಡಗಿದ್ದವು. ಇದನ್ನು ನೋಡಿದ ಪೊಲೀಸ್ ಕಾನ್ಸ್ ಟೇಬಲ್ ಜಿಎನ್ ರವಿಕುಮಾರ್ ಅವರನ್ನು ರಕ್ಷಿಸಿದ್ದಾರೆ.

ಅರಮನೆ ಮೈದಾನದಲ್ಲಿ ಶೆಲ್ಟರ್ ಕುಸಿತ: ಮಕ್ಕಳನ್ನು ರಕ್ಷಿಸಿದ ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್
ಪೊಲೀಸ ಕಾನ್ಸ್ ಟೇಬಲ್ ಜಿ.ಎನ್. ರವಿಕುಮಾರ್
Published On :

ಬೆಂಗಳೂರು: ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಮಕ್ಕಳು ಆಶ್ರಯ ಪಡೆದಿದ್ದ ತಾತ್ಕಾಲಿಕ ಶೆಲ್ಟರ್ ಗಳು ಕುಸಿಯತೊಡಗಿದ್ದವು. ಇದನ್ನು ನೋಡಿದ  ಪೊಲೀಸ್ ಕಾನ್ಸ್ ಟೇಬಲ್ ಜಿಎನ್ ರವಿಕುಮಾರ್ ಅವರನ್ನು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ.

ಪೊಲೀಸ್ ಇಲಾಖೆಗೆ ಸೇರಿ ಕೇವಲ ಮೂರು ತಿಂಗಳಾಗಿರುವ 27 ವರ್ಷದ ರವಿಕುಮಾರ್ ಅವರನ್ನು ಅರಮೈನ ಮೈದಾನದಲ್ಲಿದ್ದ ವಲಸೆ ಕಾರ್ಮಿಕರ ಮೇಲೆ ಕಣ್ಣಿಡಲು ನಿಯೋಜಿಸಲಾಗಿತ್ತು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರವಿಕುಮಾರ್,ಟೆನಿಸ್ ಪೆವಿಲಿಯನ್ ನಲ್ಲಿ ವಲಸೆ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಲ್ಟರ್ ಗಳ ಮೇಲೆ ಬಿರುಗಾಳಿಗಾಳಿದ ಮರದ ಕೊಂಬೆಯೊಂದು ಬಿದ್ದಿತ್ತು.ಇದರಿಂದ ಶೆಲ್ಟರ್ ನ ಭಾಗವೊಂದು ಹಾನಿಯಾಗಿ, ಇನ್ನೊಂದು ಮೂಲೆಗೆ  ವಲಸೆ ಕಾರ್ಮಿಕರು ತೆರಳಿದರು.ಇದನ್ನು ನೋಡಿದ ನಾನು ಶೆಲ್ಟರ್ ನ ಇನ್ನೊಂದು ಭಾಗವು ಕುಸಿಯುವ ಸಾಧ್ಯತೆ ಇದ್ದರಿಂದ ಅಲ್ಲಿದ್ದವರನ್ನು ಬೇರೆಡೆಗೆ ಕರೆದೊಯ್ದೆ. ಟೆಂಟ್ ನ ಒಳಗಡೆ ಇದ್ದ ಮೂವರು ಮಕ್ಕಳು ಹಾಗೂ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾಗಿ ತಿಳಿಸಿದರು. 

ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಎಂಬಿಎ ಪದವೀಧರನಾಗಿರುವ ರವಿಕುಮಾರ್, ಶಿವಮೊಗ್ದದ ಕುವೆಂಪು ವಿಶ್ವ ವಿದ್ಯಾನಿಯಲದ ಚಿನ್ನದ ಪದಕ ವಿಜೇತರಾಗಿದ್ದಾರೆ. ಜನರು ಪರ್ಸ್, ಚಪ್ಪಲಿಗಳನ್ನು ತೆಗೆದುಕೊಳ್ಳಲು ಕುಸಿದು ಬಿದ್ದಿರುವ ಅವಶೇಷಗಳ ಕಡೆಗೆ ಹೋಗದಂತೆ ಮನವೊಲಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ. 

ರವಿಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿರುವ ಶಿವಾಜಿನಗರ ಇನ್ಸ್ ಪೆಕ್ಟರ್ ಸಿದ್ದರಾಜು, ರವಿಕುಮಾರ್ ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನೂ ತರಬೇತಿಯನ್ನು ಪೂರ್ಣಗೊಳಿಸಿಲ್ಲ.  ಸೇವೆಗೆ ಸೇರಿದ ದಿನದಿಂದಲೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೊಗಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.